Damage Book

THE BOOK WAS DRENCHED

\

ಬಿ. ಬಿ, ಡಿ. ಪನರ್‌ ಪ್ರೆಸ್‌ ಬೆಂಗಳೂರು ನಗರ

UNIVERSAL LIBRARY Ne

OU 19863

AdVddl | IVSHAINN

OUP—556—13-7-71—4000. | OSMANIA UNIVERSITY LIBRARY

CalNo. K 221 Accession No. ke Author RL A

Title

This book should be returned on or before the date last marked below

ಯೆ (ಸು ಕೈಸ್ತ

ಲಬ. ಡಿ. ಹನರ್‌ ಪ್ರೆ ಜಂಗಳ್ಕೂರು ನಗರ ೧೯೪೧

ಪುಸ್ತಕದ ಎಲ್ಲಾ ಹಕ್ಕೂ ಗ್ರಂಥಕರ್ತರದು |

ರತ್ನನ ಶಿಶುಸಾರಾತ್ಯ

ತುತ್ತೂರಿ ಕಡಲೆಪುರಿ

ಚುಟಿಕ ಗುಲಗಂಜಿ ಹೆನೆಹಾಲು ಕಲು ಸಕ್ಕರೆ ಹೋಳಿತಳ ಲ್‌ ಆಗ

ರತ್ತನ ಬಾಲಸಾಶಿತ್ತ

ಗೌತಮ ಬುದ್ದ ಯೇಸು ಕ್ರಿಸ್ತ ಶ್ರೀ ರಾಮಚಂದ್ರ) ನರಿಯ ಬಾಲ ಅಶೋಕ ವತೌರ್ಯ ದಾನಪೀರ ವಿಶ್ವಂತರ ಶ್ರೀ ಹರ್ಷ ಪಂಚಾಯುಧ

ದೊರೆಯುವ ಸ್ಪಳಗಳು - ಸತ್ಯಶೋಧನ ಪುಸ್ತ ಭಂಡಾರ, ಕೋಟಿ, ಬೆಂಗಳೂರು ಪ್ರೋಗ್ರೆಸ್‌ ಬುಕ್‌ ಸ್ಟಾಲ್‌ ಮೈಸೂರು

ಜೀವನ ಪುಸ್ತಕಾಲಯ, ಧಾರವಾಡ

ಬಿನ್ನಹ

ಕನ್ನಡನಾಡಿನ ಮಕ್ಕಳಿಗಾಗಿ ಹಂದೆ "ಶ್ರೀ ರಾಮುಚಂದೃ] " ಗೌತಮ ಬುದ್ಧ?, "ಅಶೋಕ ಮೌರ್ಯ ' ಮತ್ತು "ಶ್ರೀಹರ್ಷ? ಎಂಬ ಜೀವನ ಕಥೆಗಳನ್ನು ಬರೆದಂತೆಯೇ ಈಗಲೂ ಯೇಸು ಕ್ರಿಸ್ತ' ಎಂಬ ಜೀವನ ಕಥೆಯನ್ನೂ ಬರೆದು ಒಪ್ಪಿಸುತ್ತಿದ್ದೇನೆ. ಇದು ಮಕ್ಕಳನ್ನು ಉದ್ದೇಶಿಸಿ ಬರೆದ ಜೀವನ ಕಥೆಯೇ ಹೊರತು ದೊಡ್ಡವರಿ ಗಾಗಿ ಬರೆದ ಜೀವನ ಚರಿತ್ರೆ ಯಲ್ಲವೆಂದು ಮತ್ತೊಮ್ಮೆ ತಿಳಿಸಬಯಸು ತ್ತೇನೆ.

ಹಿಂದಿನ ಪುಸ್ತಕಗಳಂತಲ್ಲದೆ, ಇದರಲ್ಲಿ ಅಪರಿಚಿತವಾದ ಹೆಸರು ಗಳಿಂದ ಸ್ವಲ್ಪ ತೊಡಕಾಗುವುದು ಸಹಜವೇ ಅದಕ್ಕಾಗಿ, ಜೀವನ ಕಥೆಯನ್ನು ಪ್ರಾರಂಭಿಸುವ ಮೊದಲು, ಮುಂದೆ ಕೊಟ್ಟಿರುವ ಹೆಸರುಗಳ ಪಟ್ಟಿಯನ್ನು ಒಂದೆರಡು ಸಲ ಓದಿಕೊಂಡರೆ, ಕಿವಿಗೆ ಬಿದ್ದ ಬಳಕೆಯಿಂದ

ಉಳಿದ ಓದು ಸುಲಭವಾಗುತ್ತದೆ. ಮಕ್ಕಳ ಕೈಯಲ್ಲಿ ಪುಸ್ತಕ ಬೆಳೆಯಲೆಂದು ಬಯಸುತ್ತೇನೆ.

ಮಾರ್ಚ್‌, ೧೯೪೧ | ಹಾರ್ಟ್‌

ಮಲ್ಲೇಶ್ವರ ಜಿಪಿ ರಾಜ ತ್ಪಂ

ಹೆಸರುಗಳ ಪರಿಚಯ ಜನಗಳ ಹೆಸರು-ಗಂಡಸರು

ಯೇಸು-._ ಇವನೇ 6 ಕ್ರಿಸ್ತ, ಜಗದ್ರಕ್ಷಕ, ಲೋಕದ ಉದ್ದಾರಕ್ಕಾಗಿ ಭೂಮಿಗೆ ಬಂದ "ದೇವರ ಮಗ. ಇವನಿಗೆ ಮನುಷ್ಯ ಶುಮಾರ ನೆಂದೂ ಹೆಸರು.

ಯೋಹಾನೆ (ಸ್ನಾನಿಕ)--ಯೇಸು ಬರುವುದನ್ನು ಯೆಹೂದ್ಯರಿಗೆ ಸಾರುತ್ತಾ ಬಂದವನು.

ಯೋಹಾನ (ಜೆಜೆದಾಯನೆ ಮಗ) - ಯೇಸುನಿನ ಹನ್ನೆ ರಡು ಪ್ರಚಾರಕರಲ್ಲಿ ಒಬ್ಬ.

ಜಕರೀಯ-ಸ್ಲಾನಿಕ ಯೋಹಾನನ ತಂದೆ.

ಯೋಸೇಫ (೧) ಯೇಸುನಿನ ತಂದೆ.

ಯೋಸೇಫ (೨)--ಯೇಸುವಿನ ತಮ್ಮಂದಿರಲ್ಲಿ ಒಬ್ಬ.

ಯೋಸೇಫ (೩)- ಯೇಸುವನ್ನು ಒಪ್ಪ ಮಾಡಿದವನು

ಯಾಕೋಬ (೧) ಯೇಸುವಿನ ತಮ್ಮಂದಿರೆಲ್ಲಿ ಒಬ್ಬ.

ಯಾಕೋಬ (೨) --ಜೆಬದಾಯನ ಮಗ್ಯ ಯೇಸುವಿನ ಹನ್ನೆ ರಡು ಪ್ರಚಾರಕರಲ್ಲಿ ಒಬ್ಬ. ಯಾಕೋಬ, (೩)--ಅಲ್ಫಾ ಯನ ಮಗ, ಯೇಸುವಿನ ಹನ್ನೆ ರಡು ಪ್ರಚಾರಕರಲ್ಲಿ ಒಬ್ಬ. ಯಾಕೋಬ (೪)--ಸಮಾರಿಯಾದಲ್ಲಿ ಬಾನಿ ಸೆಗೆಸಿಕಗರ

ಯೂದ (೧)--ಯೇಸುಪಿನ ಹನ್ನೆರಡು ಜನ ಪ್ರಚಾರಕರಲ್ಲಿ ಒಬ್ಬ.

ಯೂದ (೨)--ಇವನಿಗೆ ಇಸ್ಕರಿಯೋತ ಯೂ ಹೆಸರು. ಇವನೇ ಗುರು ದ್ರೋಹಮಾಡಿ, ಯೇಸುವನ್ನು ಯೆಹೊದ್ಯರಿಗೆ ಹಿಡಿದೊಪ್ಪಿ ಸಿದವನು.

ಯೂದ (೩) ಯೇಸುವಿನ ನಾಲ್ಕು ತಮ್ಮಂದಿರಲ್ಲಿ ಒಬ್ಬ.

ಸೀನೋನ (೧)--ಯೇಸುವಿನ ಹನ್ನೆರಡು ಜನ ಪ್ರಚಾರಕರಲ್ಲಿ ಮುಖ್ಯನಾದವನು. ಪೇತ್ರ ನೆಂದೂ ಇನನಿಗೆ ಹೆಸರು.

ಸೀನೋನ (೨)--ಯೇಸುವಿನ ಹನ್ನೆ ರಡು ಜನ ಶಿಷ್ಯರಲ್ಲಿ ಇನ್ನೊಬ್ಬ.

ಸೀಮೋನೆ (೩)--ಯೇಸುನಿನ ತಮ್ಮಂದಿರಲ್ಲಿ ಒಬ್ಬ.

ಸೀಮೋನ (೪)--ಯೇಸುವನ್ತು ತನ್ನ ಮನೆಗೆ ಊಟಕ್ಕೆ ಕರೆದ ಫರಿಸಾಯ.

ಸೀನೋನ (೫)--ಬೇಥಾನ್ಯದಲ್ಲಿ ಯೇಸುವನ್ನು ಮನೆಗೆ ಊಟಕ್ಕೆ ಕರೆದಿದ್ದ ವನು.

ಆಂದ್ರೆ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ--ಯೇಸುನಿನ ಹನ್ನೆರಡು ಜನ ಪ್ರಚಾರಕರಲ್ಲಿ ಐವರು. [ಉಳಿದವರು: ಸೀಮೋನ (ಪೇತ್ರ), ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರು, ಅಲ್ಫಾ ಯನ ಮಗ

1

ಯಾಕೋಬ, ಸೀನೋನ, ಯೂದ ಇಸ್ಕರಿಯೋತ ಯೂದ]. ಪ್ರಚಾರಕ ರಿಗೆ ಅಪೊಸ ಲರು ಎಂದು ಹೆಸರು. ನತಾನಯೇಲ--ಯೇಸುವನ್ನು ನಂಬಿದ್ದವನೊಬ್ಬ,

ಸಿಮೆಯೋನ್‌--ಯೆರೂಸಲೇಮ್‌ ದೇವಾಲಯದಲ್ಲಿ ಯೇಸುವನ್ನು ಕುರಿತು ಭವಿಷ್ಯ ಹೇಳಿದವನು.

ಯಾಯೀರ- ಇವನ ಸತ್ತು ಹೋಗಿದ್ದ ಮಗಳನ್ನು ಯೇಸು ಬದುಕಿಸಿದನು

ಲಾಜರ--ಇವನೂ ಸತ್ತು ಹೋಗಿದ್ದನು, ಯೇಸುವಿನ ಕೃಪೆಯಿಂದ ಬದುಕಿಬಂದನು.

ಜಕ್ಕಾಯ--ಯೇಸುವಿನಿಂದ ಉದ್ದಾ ರವಾದ ಒಬ್ಬ ಸುಂಕದವ.

ಲೇವಿ--ಯೇಸುವಿನಿಂದ ಉದ್ದಾರೆವಾದ ಇನ್ನೊ ಬ್ರ ಸುಂಕದವ.

ರೂಫ--ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಹೋದವನು.

ಬರಬ್ಬ---ಕಳ್ಳ, ಕೊಲೆಗಾರ, ದಂಗೆಕೋರ, ಯೇಸುವಿಗೆ ಬದಲಾಗಿ ಯೆಹೂದ್ಯರಿಂದ ಬಿಡುಗಡೆ ಪಡೆದವನು.

ಮೋಶೆ, ಎಶಾಯ, ಎಲೀಯ, ಎಲೀಷ-- ಯೆಹೂದ್ಯರ ಪ್ರವಾದಿಗಳು.

ದಾನೀದ-ಯೇಸುನಿನ ವಂಶದ ಮೂಲ ಪುರುಷ.

ಗಬ್ರಿಯೇಲ್‌-- ದೇನದೂತ.

ಕಾಯಫ--ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಕಾರಣನಾದ ಯೆಹೂದ್ಯರ ಮುಖ್ಯ ಅರ್ಚಕ.

ಅನ್ನ-- ಕಾಯಫನ ಮಾವ.

ನಾಮಾನ್‌--ಎಲೀಷ ಎಂಬ ಪ್ರವಾದಿಯ ಕಾಲದನನು.

ಮೇಲೆ ಹೇಳಿದವರೆಲ್ಲರೂ ಯೆಹೂದ್ಯರು. ಇವರಲ್ಲಿ ಮೋಶೆಯೇ ಮುಂತಾದವರು ಬೋಧಿಸಿದ್ದ ಪರಸ್ಪರ ಪ್ರೀತಿ, ದೀನರಲ್ಲಿ ದಯೆ ಮುಂತಾದ ಮುಖ್ಯ ನಿಯಮಗಳನ್ನು ಬಿಟ್ಟು, ಆದಿತ್ತ ವಾರದ ದಿನ ಏನೂ ಸೆಲಸಮಾಡದಿರುವುದು, ಊಟ ಮಾಡುವ ಮುಂಚೆ ಕೈ ತೊಳೆಯುವುದು ಮುಂತಾದ ಅಮುಖ್ಯ ವಿಷಯಗಳಿಗಾಗಿ ಬಡಿದಾಡುತ್ತಿ ದ್ದವರು ಫರಿಸಾಯರು, ಯೆಹೂದ್ಯ ಶಾಸ್ತ್ರಗಳನ್ನು ಓದಿ ತಿಳಿದುಕೊಂಡಿ ದ್ದನರು ಯೆಹೂದ್ಯ ಶಾಸ್ತ್ರಿಗಳು; ದೇವಾಲಯದಲ್ಲಿ ಡೇವರಿಗೆ ಪೂಜೆ ಮಾಡುತ್ತಿದ್ದ ನರು ಅರ್ಚಕರು; ಅರ್ಚಕರ ಕೆಲಸದಲ್ಲಿ ಸಹಾಯಮಾಡುತ್ತಿ ದ್ದ ನರು ಲೇವ್ಕರು.

ಯೆಹೂದ್ಯರು ರೋಮ್‌ ದೇಶದವರಿಗೆ ದಾಸರಾಗಿದ್ದ ರು. ರೋವರ್‌ ದೇಶದವರೇ ರೋಮಕರು. ದಾಸರಾದ ಯೆಹೂದ್ಯರು ಸ್ವಾಮಿಗಳಾದ ರೋಮ ಕರಿಗೆ ಕಾಣಿಕೆ ಕೊಡಬೇಕಾಗಿತ್ತು. ಕಾಣಿಕೆಯನ್ನು ಜನರಿಂದ ತೆಗೆದುಕೊಡು ತ್ತಿ ದ್ದ ನರೇ ಸುಂಕದವರು. ಇವರಲ್ಲಿ ಅನೇಕರು ಯೆಹೂದ್ಯರೂ ಇದ್ದರು. ಇವರನ್ನು ಕಂಡರೆ ಫರಿಸಾಯರಿಗೆ ತುಂಬ ತಿರಸ್ಕಾ ರನಿತ್ತು.

V1

ಕೈ ಸರ್‌-ರೋಮಕರ ರಾಜ.

ಹಕೋದ (೧)--ಕೈಸರನ ಪ್ರತಿನಿಧಿಯಾಗಿ ಯೆಹೂದ್ಯರನ್ನು ಆಳುತ್ತಿದ್ದ ಉಪರಾಜ; ಯೇಸುವನ್ನು ಚಿಕ್ಕಂದಿನಲ್ಲಿ ಕೊಲ್ಲಲು ಬಯಸಿದವನು.

ಹೆರೋದ (೨--ಮೇಲಿನವನ ಮಗ. ಸ್ಥಾನಿಕ ಯೋಹಾನನನ್ನು ಕೊಲ್ಲಸಿದವನು ಯೇಸುವನ್ನು ಅವಮಾನಪಡಿಸಿದವನು.

ಹೆರೋದ್ಕ--(೨)ನೇ ಹೆರೋದನ ಅಣ್ಣ ನಾದ ಫಿಲಿಪ್ಪನ ಹೆಂಡತಿ. ಹೆರೋದನೊಡನೆ ಸಂಸಾರ ಮಾಡುತ್ತಿದ್ದ ವಳು.

ಪಿಲಾತ--ಕೈಸರನ ಪ್ರತಿನಿಧಿಯಾಗಿ ಯೆಹೂದ್ಯರನ್ನು ಆಳುತ್ತಿದ್ದ ಇನ್ನೊಬ್ಬ ಉಪ ರಾಜ್ಯ ಯೆಹೂದ್ಯರ ಬಲವಂತಕ್ಕಾಗಿ ಯೇಸುವನ್ನು ಶಿಲುಬೆಗೆ ಹಾಕಿಸಿದವನು.

ಜನಗಳ ಹೆಸರು-ಹೆಂಗುಸರು

ಮರಿಯ (೧)--ಯೇಸುನಿನ ತಾಯಿ.

ಮರಿಯ (೨)--ಯೇಸುಪಿಗೆ ತೈಲೋಪಚಾರ ಮಾಡಿದವಳು. ಲಾಜರನ ತಂಗಿ.

ಮರಿಯ (4)--ಇನಳಿಗೆ " ಮಗ್ಗ ಲದ ಮರಿಯ ? ಎಂದೂ ಹೆಸರು. ಯೇಸುಪಿನ ಪ್ರಿಯ ಶಿಷ್ಯಳು.

ಎಲಿಸಬೆತ್‌--ಸ್ಲಾ ನಿಕ ಯೋಹಾನನ ತಾಯಿ. ಅನ್ನಾ--ಯೆರೂಸಲೇಮ್‌ ದೇವಾಲಯದಲ್ಲಿ ಯೇಸುವನ್ನು ಕುರಿತು ಭವಿಷ್ಯ ಹೇಳಿದ ಮುದುಕಿ.

ಜೆತ್ರೆ ಹೇಮ್‌--ಯೇಸು ಹುಟ್ಟದ ಊರು.

ನಜಕೇತ್‌- ಯೇಸು ಬೆಳೆದ ಊರು.

ಯೆರೂಸಲೇಮ್‌-- ಯಹೂದ್ಯ ರೆ ಪರಮಪವಿತ್ರ ನಗರ, ಯೇಸು ತನ್ನ ಕೊನೆ

ದಿನಗಳನ್ನು ಕಳೆದುದು ಇಲ್ಲಿಯೇ.

ಗೊಲೊ ಥಾ- ಯೆರೂಸಲೇಮಿನ. ಬಳ್ಳಿ, ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಾನ.

ಗಲಿಲಾಯ, ಇಸ್ರಯೇಲ, ಯೂದಾಯ, ಸಮಾರಿಯಾ, ಕಾನಾ, ಕಸೆರ್‌ನೌಮ್‌,

ಸಿಖರ್‌, ಎಫ್ರಾಯಿಮ, ತೂರ್‌, ಸೀದೋನ್‌, ನಾಯಿನ್‌, ಯೆರಿಕೋ,

ಜೀಥಾನ್ಶ, ಗೆನೇಜರೆತ್‌ ಕೊಳ, ಬೇತ್ಸಥಾ ಕೊಳ--ಯೇಸು , ತನ್ನ ಅದ್ಭುತ ಕಾರ್ಯಗಳನ್ನೂ ಕರುಣೆಯ ಕೃ ತ್ಯಗಳನ್ನೂ ಉಪದೇಶದ ಕೆಲಸಗಳನ್ನೂ ನಡಸುವಾಗ ತಿರುಗಾಡಿದ ಮುಖ್ಯವಾದ ದೇಶಗಳು, ಊರುಗಳು, ಕೊಳಗಳು,

vii ಐಗುಪ್ತ, ಐನೋನ್‌, ಸುರಿಯಾ, ಇದುಮಾಯ- ಕತೆಯಲ್ಲಿ ಬರುನ ಇನ್ನು ಕೆಲವು ದೇಶಗಳ್ಯ ಸ್ಥಳಗಳ ಹೆಸರು. ಅರಿಮಥಾಯ-- ಯೇಸುವನ್ನು ಒಪ್ಪ ಮಾಡಿದ ಯೋಸೇಫನ ಊರು. ಯೋರನ್‌ಒಂದು ಹೊಳೆ, ಇದರಲ್ಲಿ ಸ್ನಾನಿಕ ಯೋಹಾನನು ಜನರಿಗೆ ದೀಕ್ಷಾ ಸ್ಥಾ ನಮಾಡಿಸುತ್ತಿ ದ್ದನು.

ಇತರ ಹೆನರುಗಳು

ಪಸ್ಯ--ಯೆಹೂದ್ಯರ ಮುಖ್ಯ ಹಬ್ಬ

ಸಬ್ಬತ್‌ದಿನ--ನಿರಾನುದ ದಿನಸ. ದೇವರು ಪ್ರಪಂಚದ ಸೃಷ್ಟಿಗಾಗಿ ಆರು ದಿನ ಶ್ರಮಿಸಿ ಏಳನೆಯ ದಿನ ವಿರಾಮ ತೆಗೆದುಕೊಂಡನಂತೆ. ಅದೇ ಆದಿತ್ಯವಾರ, ಏನೂ ಕೆಲಸಮಾಡದೆ ಇರಬೇಕಾದ ಸಬ್ಬತ್‌ ದಿನ.

ತಲಾಂತು ಸುಮಾರು ಮೂರು ಸಾನಿರ ರೂಪಾಯಿಗಳ ಒಂದು ಮೊತ್ತ.

ಲ್ಕ

Ne

೧೦.

ET lr 1D

ವಿವರ

ಸ್ಲಾನಿಕ ಯೋಹಾನ ಮರಿಯಳ ಮಗ ಯೇಸು ದೇವರ ಮಗ ಯೇಸು ಬೆಟ್ಟಿದ ಮೇಲಿನ ಬೋಧೆ ಕ್ರಿಸ್ತನ ಕಾರ್ಯಕಲಾಪ ಪರಲೋಕದ ರಾಜ್ಯ

ಯೇಸು ಹೇಳಿದ ಕತೆಗಳು ಯೇಸುವಿನ ಕಡೆಯ ದಿನಗಳು ವಿಚಾರಣೆ, ಮುಕ್ತಾಯ ದಿವ್ಯದರ್ಶನ

9: ೧೪ ಜು ೩೮ ೫೮ ೬೫ ಪಿಕ ೯೫

೧೧೦

ಸ್ಥಾನಿಕ ಯೋಹಾನ ಯೋಹಾನನ ಜನನ

ಹಂದೆ, ಯೂದಾಯದೇಶಕ್ಕೆ ಹೆರೋದನು ಅರಸನಾಗಿರುವಾಗ ಜಕರೀಯನೆಂಬ ಒಬ್ಬ ಅರ್ಚಕನಿದ್ದನು. ಅವನಿಗೆ ಎಲಿಸಬೆತ್‌ ಎಂಬವಳು ಹೆಂಡತಿ. ಅವರಿಬ್ಬರೂ ದೇವರಲ್ಲಿ ಭಯಭಕ್ತಿ ಯಿಟ್ಟು ಪಾಪಕ್ಕೆ ಹೆದರಿ ನಡೆದುಕೊಳ್ಳುತ್ತಿದ್ದರು ಅವರಿಗೆ ಅನೇಕ ಕಾಲ ವಾದರೂ ಮಕ್ಕಳೇ ಆಗಲಿಲ್ಲ. ಹಾಗೆಯೇ ಅವರು ಮುದುಕರಾದರು.

ಜಕರೀಯನಿಗೆ ದೇವರ ಎದುರಿನಲ್ಲಿ ಧೂಪ ಸಮರ್ಪಿಸುವ ಕೆಲಸ ವಿತ್ತು ಅದರಂತೆ ಒಂದು ದಿನ ಅವನು ದೇವಾಲಯದಲ್ಲಿ ಧೂವ ಸೀರದ ಮುಂದೆ ನಿಂತಿದ್ದಾಗ ದೇವದೂತನು ಒಬ್ಬನು ಅವನ ಬಳಿ ಪ್ರತ್ಯಕ್ಷನಾದನು ದೇವದೂತನನ್ನು ಕಂಡು ಜಕರೀಯನು ಹೆದರಿಕೆ ಯಿಂದ ನಡುಗಿದನು.

ದೇವದೂತನು ಅವನ ಹೆದರಿಕೆಯನ್ನು ಕಂಡು, ಹೆದರಬೇಡ, ಜಕರೀಯ ದೇವರು ನಿನಗೂ ನಿನ್ನ ಹೆಂಡತಿಗೂ ಮಗನೊಬ್ಬನನ್ನು ದಯೆಪಾಲಿಸುವನು. ಮಗನು ಯೋಹಾನನೆಂದು ಹೆಸರಾಗುವನು. ಅವನು ಮದ್ಯವೇ ಮೊದಲಾದ ಮಾದಕಗಳನ್ನು ಸೇವಿಸದೆ ದೇವರ ಕಣ್ಣಿಗೆ ದೊಡ್ಡವನಾಗುವನು ಅವನು ಮನುಷ್ಯರನ್ನು ದೇವರ ಕಡೆಗೆ ಒಲಿಸುವನು?” ಎಂದನು.

ಅದಕ್ಕೆ ಜಕರೀಯನು “ನೀನು ಹೇಳಿದಂತೆ ನಡೆಯುವುದೆಂದು ನಾನು ತಿಳಿಯುವುದು ಹೇಗೆ? ನಂನೂ ನನ್ನ ಹೆಂಡತಿಯೂ ಮುದುಕರು, ವಯಸ್ಸಾದವರು” ಎಂದು ದೇವದೂತನನ್ನು ಕೇಳಿದನು.

ಅದಕ್ಕೆ ದೇವದೂತನು “ನಾನು ದೇವರ ಸನ್ಸಿಧಿಯಲ್ಲಿರುವ ದೇವದೂತ. ನನ್ನ ಹೆಸರು ಗಬ್ರಿಯೇಲ್‌. ಆತನು ನಿನಗೆ ಸುವಾರ್ತೆ ಯನ್ನು ತಿಳಿಸುವುದಕ್ಕಾಗಿ ನನ್ನನ್ನು ಕಳಿಸಿದ್ದಾನೆ. ಮಾತಿನಲ್ಲಿ ನಿನಗೆ ನಂಬಿಕೆಯಿಲ್ಲದುದರಿಂದ, ನಾನು ಹೇಳಿದುದೆಲ್ಲಾ ನಡೆಯುವವರೆಗೂ ನೀನು ಮೂಗನಾಗಿರು” ಎಂದನು.

ಯೇಸು ಕ್ರಿಸ್ತ

ಹೀಗೆ ಈಕಡೆ ಇವರು ಮಾತನಾಡುತ್ತಿರಲು ಆಕಡೆ ದೇವಸ್ಥಾನದ ಹೊರ ಅಂಗಳದಲ್ಲಿ ನಿಂತವರು ಜಕರೀಯನು ಏಕೆ ಇಷ್ಟು ವೇಳೆ ಒಳಗೆ ಇದ್ದಾನೆ? ದೇವರ ಎದುರಿಗೆ ಧೂಪ ಹಾಕುವುದಕ್ಕೆ ಎಷ್ಟು ಹೊತ್ತು ಬೇಕು?” ಎಂದು ಮಾತನಾಡಿಕೊಂಡರು. ಅಷ್ಟರಲ್ಲಿ ಜಕರೀಯನೇ ಹೊರಗೆ ಬಂದು ಬರಿಯ ಕೈಸನ್ನೆಮಾಡುತ್ತಾ ಮೂಗನಾಗಿಯೇ ಇದ್ದನು. ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನವಾಗಿರ ಬೇಕೆಂದು ಅವರು ತಿಳಿದುಕೊಂಡರು.

ದೇವರು ತಾನು ಹೇಳಿಕಳಿಸಿದಂತೆಯೆ ಜಕರೀಯನಿಗೂ ಎಲಿಸಬೆತ ಳಿಗೂ ಒಬ್ಬ ಮಗನನ್ನು ದಯೆಪಾಲಿಸಿದನು. ಮಗುವಿಗೆ ಎಂಟು ದಿವಸ ವಾದಾಗ ಬಂಧುಬಳಗನೆಲ್ಲಾ ಬಂದು ಸೇರಿ, ಮಗುವಿಗೆ ಏನು ಹೆಸರಿಡುವು ದೆಂದು ಯೋಚಿಸಿದರು.

"ಮಗುವನ್ನೂ ಜಕರೀಯನೆಂದೇ ಕರೆಯೋಣ” ಎಂದು ಅನೇಕರು ಅಭಿಪ್ರಾಯಪಟ್ಟಿರು. ಆದರೆ ಮಗುವಿನ ತಾಯಿ ಅದಾಗದು. ಇವನಿಗೆ ಯೋಹಾನನೆಂದು ಹೆಸರಿಡಬೇಕು” ಎಂದಳು. “ಆದರೆ, ನಿಮ್ಮ ಮನೆ ಯಲ್ಲಿ ಯಾರಿಗೂ ಹೆಸರು ಇಟ್ಟಲ್ಲವೆಲ್ಲ” ಎಂದು ಬಂದ ಬಂಧುಬಳಗ ಹೇಳಿದರು. ಮಗುವಿಗೆ ಏನು ಹೆಸರು ಇಡೋಣ? ಎಂದು ಅವರು ಜಕರೀಯನಿಗೆ ಸನ್ನೆಮಾಡಿ ಕೇಳಿದರು.

ಆಗ ಜಕರೀಯನು ಒಂದು ಹಲಗೆಯನ್ನು ತೆಗೆದುಕೊಂಡು ಅದರ ಮೇಲೆ ಇವನ ಹೆಸರು ಯೋಹಾನ್‌ * ಎಂದು ಬರೆದನು. ಅವರಿಗೆಲಾ ಆಶ್ಚರ್ಯವಾಯಿತು. ಏಕೆಂದರೆ, ಮಗುವಿಗೆ ಹೆಸರಿಡಬೇಕೆಂದು ದೇವದೂತನು ಹೇಳಿದ್ದುದನ್ನು ಅವನು ಅವರಿಗೆ ತಿಳಿಸಿರಲಿಲ್ಲ.

ಹೀಗೆ ಜಕರೀಯನು ಮಗುವಿನ ಹೆಸರನ್ನು ಬರೆದೊಡನೆಯೆ ಅವನ ಮೂಗತನ ಮಾಯವಾಯಿತು. ಅವನು ದೇವರನ್ನು ಬಾಯಿ ತುಂಬ ಹೊಗಳಿ ಸ್ತೋತ್ರಮಾಡಿದನು. ಆಗ್ರ ದೇವದೂತನು ಬಂದುದೇ ಮೊದ ಲಾದ ಎಲ್ಲಾ ವಿಚಾರವನ್ನೂ ತಿಳಿದು, ಇದು ಎಂತಹ ಅದ್ಭುತ ವಾದ ಮಗು! ಎಂದು ಯೂದಾಯದವರೆಲ್ಲರೂ ಆಶ್ಚರ್ಯಪಟ್ಟರು.

ಮಗು ಎತ್ತರವಾಗಿ ಬಲವಾಗಿ ಬೆಳೆಯಿತು.

ಸ್ಥಾನಿಕ ಯೋಹಾನ 4 ಯೋಹಾನನ ಕಾರ್ಯ

ಬುದ್ಧಿ ಬಂದ ಮೇಲೆ ಯೋಹಾನನು ಮನೆಯನ್ನು ಬಿಟ್ಟು ಕಾಡು ಗಳಲ್ಲಿ ವಾಸಮಾಡಿದನು, ನಿರ್ಜನವಾದ ಬೆಂಗಾಡುಗಳಲ್ಲಿ ಅಲೆದಾಡಿ ದನು. ಉದ್ದವಾದ ಕೂದಲಿನ ಒಂಟಿಯಚರ್ಮವನ್ನು ಹೊದೆದು, ಮಿಡತೆಗಳನ್ನು ತಿನ್ನುವನು, ಕಾಡು ಜೇನು ಕುಡಿಯುವನು. ತಲೆಯ ತುಂಬ ಇಳಿಗೂದಲು ಬೆಳಸಿದ್ದನು. ಹೀಗೆ ಅಲೆದ ಅನಂತರ ಬೆಂಗಾಡಿ ನಿಂದ ನಾಡುಗಳಿಗೆ ಬಂದು, ಮುಂದೆ ಬರುವ ಯೇಸುವಿನ ವಿಚಾರ ವಾಗಿ ಜನಕ್ಕೆ ಬೋಧಿಸುತ್ತಿದ್ದನು.

ಯೋಹಾನನು ತಾನು ವಾಸಿಸುತ್ತಿದ್ದ ಬೆಂಗಾಡನ್ನು ಬಿಟ್ಟು ಯೋರ್ದನ್‌ ಎಂಬ ನದಿಯ ತೀರಕ್ಕೆ ಬರುವನು. ಅಲ್ಲಿ ಅವನ ಉಪದೇಶ ವನ್ನು ಕೇಳುವುದಕ್ಕಾಗಿ ಯೆರೂಸಲೇಮಿನವರೂ ಯೂದಾಯದವರೂ ಗುಂಪು ಗುಂಪಾಗಿ ಬರುವರು. ಆಗ ಯೋಹಾನನು ಮುಂದೆ ಬರುವ ಮಹಾಕ್ರೋಧಕ್ಕೆ ಸಿಕ್ಕಿ ನಾಶವಾಗದಂತೆ ನಿಮ್ಮನ್ನು ಎಚ್ಚರಿಸಲು ದೇವರು ನನ್ನನ್ನು ಕಳಿಸಿದ್ದಾನೆ? ಎನ್ನುವನು. ನಿಮ್ಮ ಪೂರ್ವಿಕರು ಸತ್ಪುರುಷರಾಗಿದ್ದ ಮಾತ್ರಕ್ಕೇ ನೀವು ತಪ್ಪಿಸಿಕೊಳ್ಳು ವಂತಿಲ್ಲ. ನಿಮ್ಮ ಹಿಂದಿನವರು ದೇವರ ಸೇನೆ ಮಾಡಿದ ಮಾತ್ರಕ್ಕೇ ನೀವು ದೇವರ ಕೃಪೆಗೆ ಪಾತ್ರರಾಗುವಂತಿಲ್ಲ. ಪ್ರತಿಯೊಬ್ಬನೂ ಒಂದೊಂದು ಮರವಿದ್ದಂತೆ ಇರಬೇಕು. ತನ್ನ ತನ್ನ ಸ್ಥಳದಲ್ಲಿ ನಿಂತು, ತನ್ನ ತನ್ನ ಹಣ್ಣುಗಳನ್ನು ಬಿಟ್ಟು, ತನ್ನಿಂದ ಆದಮಟ್ಟಿಗೆ ದೇವರ ಸೇವೆಮಾಡಬೇಕು. ಒಳ್ಳೆಯ ಹಣ್ಣು ಬಿಡದ ಮರವನ್ನು ಕಡಿದು ಕಟ್ಟಿ ಗೆಯಾಗಿ ಉರಿಸುವರು. ಆದ್ದ ರಿಂದ ನೀವು ಒಬ್ಬರಿಗೆ ಒಬ್ಬರು ದಯೆ ತೋರಬೇಕು, ಪ್ರೀತಿ ತೋರ ಬೇಕು. ಅನ್ನವಿಲ್ಲದವರಿಗೆ ಅನ್ನ ಕೊಡಬೇಕು, ಬಟ್ಟಿ ಯಿಲ್ಲದವರಿಗೆ ಬಟ್ಟಿ, ಕೊಡಬೇಕು. ಸುಳ್ಳಾಡಬಾರದು, ಕದಿಯಬಾರದು, ಅಹಂಕಾರ ದಿಂದ ಮೆರೆಯಬಾರದು. ದೇವರಲ್ಲಿ ನಿಮಗೆ ಪ್ರೀತಿಯಿದೆಯೆಂಬುದನ್ನು ನೀವು ಬದುಕುವ ರೀತಿಯಲ್ಲಿ ತೋರಿಸಬೇಕು” ಎಂದು ಹೇಳುವನು.

ಅವನ ಮಾತನ್ನು ಕೇಳಿದವರು ಪಾಪಕ್ಕೆ ಅಸಹ್ಯಪಡುವರು ಸನ್ಮಾರ್ಗದಲ್ಲಿ ನಡೆಯಲು ಇಷ್ಟಪಡುವರು. ದುರ್ಮಾರ್ಗದಲ್ಲಿ ನಡೆದರೆ

ಯೇಸು ಕ್ರಿಸ್ತ

ಮುಂದೆ ದೇವರ ಕ್ರೋಧಕ್ಕೆ ಈಡಾಗಬೇಕಾಗುವುದೆಂದು ಅಂಜುವರು. ಅಂಜಿ, ಯೋಹಾನನ ಹತ್ತಿರ ಬಂದು ತಾವು ಮಾಡಿದ ಪಾಪನನ್ನೆಲ್ಲಾ ಅವನಿಗೆ ತಿಳಿಸಿ ಸಶ್ಚಾತ್ತಾಸಪಡುವರು. ಆಗ ಯೋಹಾನನು ಅವರನ್ನು ಯೋರ್ದನ್‌ ನದಿಗೆ ಕರೆದುಕೊಂಡು ಹೋಗಿ ಅವರಿಗೆ ದೀಕ್ಸಾಸ್ನಾನ ಮಾಡಿಸುವನು.

ಹೀಗೆ ಜನರ ಹೃದಯದ ಕೊಳೆಗಳನ್ನು ತನ್ನ ದೀಕ್ಸಾಸ್ನಾನದಿಂದ ಯೋಹಾನನು ಕಳೆಯುವುದನ್ನು ಕಂಡವರನೇಕರು ಅವನೇ ಕ್ರಿಸ್ತನಿರ ಬೇಕೆಂದು ಮಾತನಾಡಿಕೊಂಡರು. ಏಕೆಂದರೆ ಮೋಶೆ ಎಂಬವನ ಕಾಲ ದಿಂದ ಬಂದ ಪ್ರವಾದಿಗಳೆಲ್ಲರೂ ಕ್ರಿಸ್ತನು ಬರುತ್ತಾನೆ. ಬಂದು, ಜನರ ಹೃದಯದ ಕೊಳೆಗಳನ್ನು ಕಳೆದು ಉದ್ದಾರಮಾಡುತ್ತಾನೆ » ಎಂದು ಹೇಳಿದ್ದರು. ಆದ್ದರಿಂದ ಕೆಲವರು ಇವನೇ ಕ್ರಿಸ್ತ ಅಹುದು” ಎಂದರು. ಇತರರು ತಲೆಯಲ್ಲಾ ಡಿಸಿ ಯೆಹೊದ್ಯರನ್ನು ಉದ್ದಾರಮಾಡಲು ಬರುವ ವನು ಇವನಂತೆ ಬಡಕಲು ವೇಷದಿಂದ ಬರುವುದಿಲ್ಲ. ರಾಜಾಧಿರಾಜನಂತೆ ಬರುವನು” ಎಂದರು.

ಆದರೆ ಯೋಹಾನನು ಮಾತ್ರ ನಾನು ಬೆಂಗಾಡಿನಲ್ಲಿ ಕೂಗುವ ಒಂದು ಕೂಗು. ನಾನು ಕ್ರಿಸ್ತನಲ್ಲ. ನನ್ನ ಅನಂತರ ಒಬ್ಬನು ಬರುವನು. ಅವನ ಪಾದರಕ್ಸೈಗಳ ಕಟ್ಟನ್ನು ಕಳಚುವುದಕ್ಕೂ ನಾನು ಅರ್ಹನಲ್ಲ. ನಾನು ನೀರಿನಿಂದ ನಿಮಗೆ ಸ್ನಾನಮಾಡಿಸುತ್ತೇನೆ. ಮುಂದೆ ಬರುವ ಅನನು ನನಗಿಂತ ದೊಡ್ಡವನು; ನಿಮಗೆ ಬೆಂಕಿಯಿಂದ ಸ್ಪಾನಮಾಡಿ ಸುತ್ತಾನೆ. ಆತನ ಕೈಯಲ್ಲಿ ಮೊರವಿದೆ. ತನ್ನ ಕಣದಲ್ಲಿಯ ಕಾಳಿನ ರಾಶಿ ಯನ್ನು ತೂರಿ, ಗಟ್ಟ ಗೋಧಿಯನ್ನು ಕಣಜಕ್ಕೆ ತುಂಬುವನು; ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಡುವನು” ಎಂದು ಹೇಳುತ್ತಾ, ಜನರಿಗೆ ದೀಕ್ಸಾಸ್ನಾನ ಮಾಡಿಸಿ ಅವರನ್ನು ಉತ್ತಮಗೊಳಿಸುತ್ತಿದ್ದನು.

ಹೀಗೆ ಯೋಹಾನನು ಕ್ರಿಸ್ತನ ಆಗಮನಕ್ಕೆ ಜನರನ್ನು ಸಿದ್ಧ ಗೊಳಿಸುತ್ತಿದ್ದನು.

ಮರಿಯಳ ಮಗ ಯೇಸು

ಮರಿಯಳಿಗೆ ದೇವರ ವರ ದೇವದೂತ ಗಬ್ರಿಯೇಲನು, ಜಕರೀಯನಿಗೆ ಅಂದು ದೇವಾಲಯ ದಲ್ಲಿ ಪ್ರತ್ಯಕ್ಷನಾದ ಆರು ತಿಂಗಳ ಮೇಲೆ, ಪುನಃ ದೇವರ ಆಜ್ಞೆಯಂತೆ ನಜರೇತ್‌ ನಗರದಲ್ಲಿದ್ದ ಮರಿಯ ಎಂಬ ಕನ್ನಿಕೆ ಗೆ ಪ್ರತ ಶೈ ಕ್ರನಾದನು.

ಮರಿಯಳು ಕೂಡ ಜಕರೀಯನಂತೆಯೇ ದೇವದೂತನನ್ನು ಕಂಡು ಹೆದರಿದಳು. ಗಬ್ರಿಯೇಲನು ಜಕರೀಯನ ಭಯವನ್ನು ಹೋಗಲಾಡಿಸಿ ದಂತೆಯೇ ಮರಿಯಳನ್ನೂ ಕುರಿತು“ಹೆದರಬೇಡ, ಮರಿಯ. ನಿನ್ನ ಮೇಲೆ ದೇವರು ಕೃಪೆಮಾಡಿದ್ದಾನೆ. ನಿನಗೆ ಒಬ್ಬ ಮಗನಾಗುವನು. ಅವನು ಯೇಸು ಎಂದು ಹೆಸರಾಗುವನು ಅವನು ಮಹಾಪುರುಷನಾಗುವನು, ದೇವರ ಮಗನೆಂದು ಪ್ರಸಿದ್ಧನಾಗುವನು. ದೇವರ ದಯೆಯಿಂದ ಅವನು ರಾಜನಾಗುವನು. ಅನನ ರಾಜ್ಯಭಾರಕ್ಕೆ ಚ್ಯುತಿಬರುವುದಿಲ್ಲ ಎಂದನು.

ಅದಕ್ಕೆ ಕನ್ಯೈಯಾದ ಮರಿಯಳು “ಇದು ಹೇಗಾದೀತು? ನನಗೆ ಮದುವೆಯೆ ಆಗಿಲ್ಲವಲ್ಲ!” ಎಂದಳು.

ಆಗ ಗಬ್ರಿಯೇಲನು "ಮರಿಯ, ನಿನಗೆ ಕಷ್ಟ ವೆಂದು ಕಂಡು ಬಂದುದು ದೇವರಿಗೆ ಕಷ್ಟ ವಲ್ಲ. ಆತನು ಸರ್ವಶಕ್ತ. ಬಜಿ ಎಲಿಸಬೆತ ಳಿಗೆ ಮಗನಾಗುವನೆಂಬುದನ್ನು ತಿಳಿಸಲು ದೇವರು ನನ್ನನ್ನು ಕಳಿಸಿದ್ದನು. ಈಗ, ನಿನಗೊಬ್ಬ ಮಗನಾಗುವನೆಂಬುದನ್ನು ತಿಳಿಸಲು ಪುನಃ ನನ್ನನ್ನು ಕಳಿಸಿರುವನು. ಇಷ್ಟು ಹೇಳಿದುದು ಸಾಕು?” ಎಂದನು

ಮರಿಯಳು ದೇವರ ಇಷ್ಟದಂತಾಗಲಿಯೆಂದಳು. ದೇವದೂತನು ಮರೆಯಾದನು.

ಅನಂತರ ಮರಿಯಳು ತ್ವರೆಯಿಂದ ಯೆರೂಸಲೇಮನ್ನು ಬಿಟ್ಟು ಮಲೆನಾಡಿಗೆ ಹೋದಳು. ಅಲ್ಲಿ ಎಲಿಸಬೆತ್‌ ಮತ್ತು ರಜ ಮಸಿ ಯಲ್ಲಿ ಮೂರು ತಿಂಗಳು ವಾಸಿಸಿದಳು. ಮರಿಯಳೂ ಎಲಿಸಬೆತಳೂ ಓರಗೆ ಯಲ್ಲಿ ಅಕ್ಕತಂಗಿಯರ ಮಕ್ಕಳು. ಮೂರು ತಿಂಗಳಾದಮೇಲೆ ಮರಿಯಳು

ಯೇಸು ಕ್ರಿಸ್ತ

ಹಾಟ

ತನ್ನ ಮನೆಗೆ ಹಿಂದಿರುಗಿದಳು. ಅವಳಿಗೆ ಮದುವೆಯಾಯಿತು. ಅವಳ ಗಂಡನ ಹೆಸರು ಯೋಸೇಫ್‌. ಅವನು ತೀರ ಬಡವ. ಬಡಗಿಯ ಕೆಲಸ ದಿಂದ ಅವನ ಜೀವನ.

ಯೇಸುವಿನ ಜನನ

ಕಾಲದಲ್ಲಿ ಯೆಹೂದ್ಯರು ರೋಮಕರ ಅಡಿಯಾಳುಗಳಾಗಿದ್ದರು. ಯೆಹೂದ್ಯರನ್ನು ಜಯಿಸಿದ್ದ ರೋಮಕರ ರಾಜನಿಗೆ ಕೈಸರ್‌ ಎಂದು ಹೆಸರಿತ್ತು. “ಯೆಹೂದ್ಯರ ಹೆಸರನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆಯ ಬೇಕು. ಅದರಲ್ಲಿ ಅವರ ವಂಶವನ್ನೂ ಅವರ ಐಶ್ವರ್ಯವನ್ನೂ ಕಾಣಿಸ ಬೇಕು. ಪ್ರತಿ ಯೆಹೂದ್ಯನೂ ತನ್ನ ಪೂರ್ವಿಕರು ಇದ್ದ ಊರಿಗೆ ಹೋಗಿ ಅಲ್ಲಿ ತನ್ನ ಹೆಸರನ್ನು ಬರೆಯಿಸಬೇಕು” ಎಂದು ಕೈಸರನು ಒಂದು ಆಜ್ಞೆ ಹೊರಡಿಸಿದನು

ಕ್ಸೆಸರನ ಆಜ್ಞೆಯನ್ನು ಪಾಲಿಸಲು ಮರಿಯ ಯೋಸೇಫರು ನಜ ರೇತಿನಿಂದ ಬೆತ್ಲೆ ಹೇಮ್‌ ಎಂಬ ಹಳ್ಳಿಗೆ ಹೋಗಬೇಕಾಯಿತು. ಏಕೆಂದರೆ ಯೋಸೇಫನು ಯೆಹೂದ್ಯನಾದ ದಾವೀದನೆಂಬವನ ವಂಶದವನು. ದಾವೀದನು ಬೆತ್ಲೆ ಹೇಮಿನಲ್ಲಿ ಹಿಂದೆ ಕುರಿ ಮೇಯಿಸುತ್ತಿದ್ದನು.

ಹೀಗೆ ಅವರು ಬೆತ್ಲೆ ಹೇಮಿಗೆ ಬರುವ ವೇಳೆಗೆ ಅಲ್ಲಿ ಜನಸಂದಣಿ ಬಹೆಳವಾಗಿತ್ತು. ಮರಿಯ ಯೋಸೇಫರಿಗೆ ಇಳಿದುಕೊಳ್ಳಲು ಎಲ್ಲೂ ಸ್ಥಳಸಿಕ್ಕಲಿಲ್ಲ. ಹಾಗೆಯೇ ತಂಗುವ ಸ್ಥಳ ಹುಡುಕುತ್ತಾ ಅವರು ಒಂದು ಗುಡಿಸಲಿಗೆ ಬಂದರು. ಅಲ್ಲಿ ಎತ್ತು ಕುದುರೆಗಳಿಗೆ ಹುಲ್ಲು ತಿನ್ನಿಸುವ ಒಂದು ತೊಟ್ಟಿ ಯಿತ್ತು. ಅವರಿಬ್ಬರೂ ಗುಡಿಸಲಿನಲ್ಲಿಯೇ ತಂಗಿದರು.

ಅವರು ಅಲ್ಲಿ ಇರುವಾಗಲೇ ದೇವರು ಮರಿಯಳಿಗೆ ತಾನು ಹೇಳಿದ್ದ ಮಗುವನ್ನು ಕೊಟ್ಟನು. ಮಗುವನ್ನು ಮಲಗಿಸಲು ಮೃದುವಾದ ಬಟ್ಟಿ ಕೂಡ ಅವರ ಹತ್ತಿರವಿರಲಿಲ್ಲ. ಮರಿಯಳು ಇದ್ದ ಬಟ್ಟಿಗಳಲ್ಲಿಯೆ ಮಗುವನ್ನು ಸುತ್ತಿ ಹುಲ್ಲುತೊಟ್ಟಿಯ ಹುಲ್ಲಿನಲ್ಲಿ ಮಲಗಿಸಿದಳು.

ಅದೇ ಕಾಲದಲ್ಲಿ ಒಂದು ರಾತ್ರಿ ಕೆಲವರು ಕುರುಬರು ಬೆಟ್ಟಗಳ ಮೇಲೆ ಕುರಿ ಕಾಯುತ್ತಿದ್ದರು. ಆಗ ಅವರಿಗೆ ಒಬ್ಬ ದೇವದೂತನು

ಮರಿಯಳ ಮಗ ಯೇಸು

ಪ್ರತ್ಯಕ್ಷನಾಗಿ, ಹೆದರಬೇಡಿರಿ. ದೇಶಕ್ಕೆಲ್ಲಾ ಸಂತೋಷವುಂಟು ಮಾಡುವ ಸುವಾರ್ತೆಯನ್ನು ನಾನು ನಿಮಗೆ ತಂದಿದ್ದೇನೆ. ಇದೇ ಜಿತ್ಲೆ ಹೇಮಿನಲ್ಲಿ ಕ್ರಿಸ್ತನು ಹುಟ್ಟಿ ಬಂದಿರುವನು. ಅವನು ನಿಮ್ಮಪಾಪಗಳನ್ನು ಕಳೆದು ನಿಮ್ಮನ್ನು ಉದ್ಧಾರಮಾಡುವನು. ಮಗುವನ್ನು ಬಟ್ಟೆ ಯಲ್ಲಿ ಸುತ್ತಿ ಹುಲ್ಲುತೊಟ್ಟಿ ಯಲ್ಲಿ ಮಲಗಿಸಿರುವರು. ಹೋಗಿ ಕಾಣಿರಿ” ಎಂದನು. ಅದೇ ಗಳಿಗೆಯಲ್ಲಿ ಒಂದು ಅಖಂಡವಾದ ಬೆಳಕು ಇಳಿದಂತೆ ಅನೇಕ ದೇವದೂತರು ಕಾಣಿಸಿಕೊಂಡು ದೇವರ ಮಹಿಮೆಯನ್ನು ಹಾಡಿ ಹೊಗಳಿದರು, ದೇಶಕ್ಕೆ ಜತಸುಖಗಳಾಗಲೆಂದು ಹೆರಸಿದರು. ಅನಂತರ ದೇವದೂತರೆಲ್ಲರೂ ಕಣ್ಮರೆಯಾದರು.

ಅವರು ಮರೆಯಾದ ಮೇಲೆ ಕುರುಬರು ಎದ್ದು ದೇವದೂತರು ತಂದ ಸುವಾರ್ತೆಯಂತೆ ಕ್ರಿಸ್ತನನ್ನು ಕಾಣಬೇಕೆಂದು ಬೆತ್ಲೆ ಹೇಮಿಗೆ ಹೋದರು. ಅಲ್ಲಿ, ಅವರು ಹೇಳಿದಂತೆಯೇ ಹುಲ್ಲು ತೊಟ್ಟ ಯಲ್ಲಿ ಮಲ ಗಿದ್ದ ಮಗುವನ್ನು ಕಂಡರು. ಕಂಡು, ತಾವು ಕಂಡುದನ್ನೂ ದೇವ ದೂತರು ಹೇಳಿದುದನ್ನೂ ಎಲ್ಲರಿಗೂ ತಿಳಿಸುತ್ತಾ ಹೋದರು. ಅದುವರೆಗೆ ಕಾಣದ ಅಂತಹೆ ಅದ್ಭುತವನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು.

ಮೆರಿಯಳು ಮಾತ್ರ ತಾನು ದೇವದೂತನನ್ನು ಕಂಡುದನ್ನು ಯಾರೊಡನೆಯೂ ಹೇಳಲಿಲ್ಲ. ಅದನ್ನೆಲ್ಲಾ ಮನಸ್ಸಿನಲ್ಲಿಯೇ ಇಟ್ಟು ಕೊಂಡು ಮಗುವನ್ನು ಎಚ್ಚರದಿಂದ ಕಾಪಾಡುತ್ತಿದ್ದಳು. ಅದು ತನ್ನ ಮಗುನೆನ್ನುವುದಕ್ಕಿಂತ ದೇವರ ಮಗುವೆನ್ನುವುದೇ ಸರಿಯೆಂದು ಅವಳಿ ಗೆನ್ನಿಸುತ್ತಿತ್ತು.

ದೇವಾಲಯದಲ್ಲಿ ಮಗು ಯೇಸು

ಮಗುವಿಗೆ ಎಂಟುದಿವಸವಾಡಾಗ ಯೇಸುವೆಂದೇ ನಾಮಕರಣ ಮಾಡಿದರು. ಅನಂತರ ಸೂತಕದ ದಿವಸಗಳು ಮುಗಿದ ಮೇಲೆ ಮಗು ವನ್ನು ಯೆರೂಸಲೇಮಿನ ದೇವಸ್ಥಾನಕ್ಕೆ ಕರೆದೊಯ್ದರು.

ಆಗ ಯೆರೂಸಲೇಮ್‌ ನಗರದಲ್ಲಿ ಸಿಮೆಯೋನ್‌ ಎಂಬ ಒಬ್ಬ ಸತ್ಸುರುಷನಿದ್ದನು. ಹಿಂದಿನ ಪ್ರವಾದಿಗಳೆಲ್ಲರೂ ಮುಂದೆ ಬರುವನೆಂದು

ಯೇಸು ಕ್ರಿಸ್ತ

ಭವಿಷ್ಯ ನುಡಿದಿದ್ದ ಕ್ರಿಸ್ತನನ್ನು ಕಾಣಲು ಅವನು ಕಾಯುತ್ತಿದ್ದನು. ಕ್ರಿಸ್ತನನ್ನು ಕಾಣುವವರೆಗೆ ತನಗೆ ಸಾವು ಬರುವುದಿಲ್ಲವೆಂದು ಅವನಿಗೆ ಸ್ವಪ್ನವಾಗಿತ್ತು. ಸಿಮೆಯೋನನು ದೇವಾಲಯದ ಅರ್ಚಕ. ಅದರಿಂದ್ಕ ಮರಿಯ ಯೋಸೇಫರು ಮಗು ಯೇಸುವನ್ನು ದೇವಾಲಯಕ್ಕೆ ತರೆ ತಂದಾಗ, ಸಿಮೆಯೋನನು ಮಗುವನ್ನು ಎತ್ತಿಕೊಂಡು, ದೇವರೆ, ನಿನ್ನ ಮಾತು ನಿಜವಾಯಿತು. ನಾನು ಸಾಯುವ ಮೊದಲು ಕ್ರಿಸ್ತನನ್ನು ಕಣ್ಣಾರೆ ಕಂಡೆ. ಜಗತ್ತಿನ ಬೆಳಕನ್ನು, ಪಾವನಮೂರ್ತಿಯನ್ನು ಕಂಡುದಾಯಿತು; ಇನ್ನು ನಾನು ನಿಶ್ಚಿಂತೆಯಿಂದ ಸಾಯಬಹುದು? ಎಂದ್ದು ಮರಿಯ ಯೋಸೇಫರನ್ನು ಹರಸಿ, ಮಗುವನ್ನು ಮರಿಯಳಕ್ಲೆಗೆ ಕೊಟ್ಟನು. ಮಗು ಮುಂದೆ ಮಾಡುವ ಮಹಾಕಾರ್ಯಗಳನ್ನು

ಅವರಿಗೆ ತಿಳಿಸಿದನು.

ಹೀಗೆ ಸಿಮೆಯೋನನು ಮಾತನಾಡುತ್ತಿರುವಾಗಲೇ ದೇವಾ ಲಯಕ್ಕೆ ಅನ್ನಾ ಎಂಬ ಎಂಬತ್ತುನಾಲ್ಕು ವರ್ಷದ ಮುದುಕಿಯೊಬ್ಬಳು ಬಂದಳು. ಅವಳು ಉಪವಾಸಗಳನ್ನು ಮಾಡಿ ಹಗಲೂ ರಾತ್ರಿ ದೇವರ ಸೇವೆಮಾಡುತ್ತಿದ್ದವಳು. ಮುಂದಾಗುವುದನ್ನು ನೋಡಿ ಹೇಳುವ ಸಾಮರ್ಥ್ಯ ಆಕೆಗೆ ಬಹಳವಾಗಿತ್ತು. ಅವಳು ಕೂಡ ಮಗು ಮುಂದೆ ಮಾಡುವ ಮಹಾಕಾರ್ಯಗಳನ್ನು ತಿಳಿಸಿದಳು.

ಅನಂತರ ಮರಿಯ ಯೋಸೇಫರು ನಜರೇತಿಗೆ ಹಿಂದಿರುಗಿದರು. ಅಲ್ಲಿ ಮಗು ಆರೋಗ್ಯವಾಗಿ ಬೆಳೆಯುತ್ತಿತ್ತು.

ಹೆರೋದನ ಪೀಡೆ

ಕಾಲದ ಯೆಹೂದ್ಯರಲ್ಲಿ ಕೆಲವರು ಜ್ಞಾನಿಗಳಿದ್ದರು. ಅವರು ತಮ್ಮ ಹಳೆಯ ಗ್ರಂಥಗಳನ್ನೆಲ್ಲಾ ಓದಿದ್ದರು. ಯೆಹೂದೃರನ್ನು ಉದ್ದ ರಿಸಲು ಬರುವ ಕ್ರಿಸ್ತನು ಹುಟ್ಟುವ ದಿಕ್ಕಿನಲ್ಲಿ ಒಂದು ತಾರೆ ಮಹಾ ಪ್ರಕಾಶದಿಂದ ಬೆಳಗುವುದೆಂದು ಅವರು ತಿಳಿದಿದ್ದರು. ನಕ್ಷತ್ರವನ್ನು ನೋಡುವ ಕಾಲಬಂದೀತೇ ಎಂದು ಬಹುವರುಷಗಳಿಂದ ಕಾಯುತ್ತಿದ್ದರು. ವರುಷಗಳೇನೋ ಕಳೆದು ಹೋದುವು. ಯೆಹೂದ್ಯರೂ ತಮ್ಮ ನಾಡನ್ನು

ಮರಿಯಳ ಮಗ ಯೇಸು

ಕಳೆದುಕೊಂಡು ನಿಲ್ಲಲು ನೆರಳಿಲ್ಲದವರಾದರು, ಕೈಸರನಿಗೆ ಗುಲಾಮ ರಾದರು. ಕೈಸರನ ಪ್ರತಿನಿಧಿಯಾಗಿ ಅವರನ್ನು ಆಳುತ್ತಿದ್ದ ಹೆರೋದನು ಅವರನ್ನು ಬಹುವಿಧವಾಗಿ ಪೀಡಿಸುತ್ತಿ ದ್ದ ನು.

ಒಂದು ರಾತ್ರಿ ಒಬ್ಬ ಜ್ಞಾ ನಿ ಆಕಾಶವನ್ನು ಕಣ್ಣಿ ನಿಂದ ಅಳೆದುಹೋಗುತ್ತಿ ದಾ ಒಂದು ನಕ್ಷತ್ರವನ್ನು ಕಂಡು ಜಾ ಮ್ಳ ಜುಮ್ಮೆಂದಿತು. ನಕ್ಷತ್ರ ಬೆಳಕಿನಲ್ಲಿ ಮಿಕ್ಕ ನಕ್ಷತ್ರಗಳು ಬಣ್ಣ ಗೆಟ್ಟಿ ದು ವು, ಸಣ್ಣ ಗಾಗಿದು ವು ಕರಿಮೋಡದ ಮರೆಯಿಂದ ಹೊರಗೆ ಉಕ್ಕು ಸೂರ್ಯವು ವ್ರಜೆಯಂತೆ ನಕ್ಷತ್ರದ ಬೆಳಕು ವೂರ್ವದಿಕ್ಕೆನ ಕಡೆಗೆ Wiles. ನೋಡುತ್ತಿ ದಂತೆಯೇ ನಕ್ಷತ್ರ ಚಲಿಸಿದಂತಾಯಿತು. ಅದರ ಕಿರಣ ಗಳು ದಾರಿ ತೋರಿಸುವ ಗೆರೆಗಳಂತಾದವು. ತಾವು ಬಹುದಿನದಿಂದ ಎದುರುನೋಡುತ್ತಿದ್ದ ನಕ್ಷತ್ರವೇ ಅದೆಂದು ಜ್ಞಾನಿಗೆ ಗೊತ್ತಾಯಿತು. ಆಗ ಅವನು ತನ್ನ ಜೊತೆಗೆ ಇತರ ಜ್ಞಾನಿಗಳನ್ನೂ ಕರೆದುಕೊಂಡು ನಕ್ಷತ್ರ ತೋರಿಸಿದ ದಿಕ್ಕಿಗೆ ನಡೆದನು. ಪ್ರತಿರಾತ್ರಿಯೂ ನಕ್ಷತ್ರ ಅವರಿಗೆ ದಾರಿತೋರಿಸಿ ಅವರನ್ನು ಕರೆದುಕೊಂಡು ಹೋಗುತ್ತಿತ್ತು.

ಹೀಗೆಯೇ ಅನರು ನಡೆದು ಯೆರೂಸಲೇಮಿಗೆ ಬಂದರು. ಅಲ್ಲಿ 4 ಯೆಹೂದ್ಯ ರರಾಜನಾಗಲು ಹುಟ್ಟ ರುವವನು ಎಲ್ಲಿ? ಅವನನ್ನು ತೋರಿ ಸುವ ನಕ್ಷತ ವನ್ನು ಪೂರ್ವದಲ್ಲಿ ಜು ಅವನನ್ನು, ಆರಾಧಿಸಲು ಇಲ್ಲಿಗೆ ಬಂದಿದ್ದೇವೆ” 11

ಮಾತು ಹಾಗೆಯೇ ಹರಡಿ ಹೆರೋದನ ಕನಿಗೂ ಮುಟ್ಟಿತು. ಯೆಹೂದ್ಯರ ರಾಜನೊಬ್ಬನ ನು ಹುಟ್ಟಿರುವುದು ನಿಜವಾ ದರೆ ತನ್ನ ಅಧಿಕಾರ ಕೊನೆಗಾಣುವುದೆಂದು ಚನ ಜೆ ಆದರೂ ತನ್ನ ಅಂಜಿಕೆ ಯನ್ನು ತೋರಿಸಿಕೊಳ್ಳದೆ, ಮುಖ್ಯ ಅರ್ಚಕರನ್ನೂ ಶಾಸ್ತಿ ಸ್ರಿಗಳನ್ನೂ ಕರೆದು 9 ಎಲ್ಲಿ ಹುಟ್ಟಿರಬಹುದು? ? ಎಂದು ಕೇಳಿದನು. ಅವರು ಹಳೆಯ ಗ್ರಂಥಗಳನ್ನು ತಿರುವಿಹಾಕಿ, ಬೆತ್ಲೆ ಹೇಮಿನಲ್ಲಿ ಹುಟ್ಟುವ ನೆಂದು ಭವಿಷ್ಯ ಹೇಳಿದ್ದಾ ರೆ? ಎಂದರು. ಆಗ ಹೆರೋದನು ಯೆರೂಸ ಲೇಮಿಗೆ ಬಂದಿದ್ದ "ಜ್ಞಾನಿಗಳನ್ನು ಕರೆಸಿ, “ನೀವು ಜಿತ್ಸೆಹೇಮಿಗೆ ಹೋಗಿ ಮಗುವನ್ನು ಹುಡುಕಿರಿ. ಅದನ್ನು ಕಂಡಾಗ ನನಗೆ ಬಂದು

೧೦ ಯೇಸು ಕ್ರಿಸ್ತ

ತಿಳಿಸಿರಿ. ನಾನೂ ಮಗುವನ್ನು ಆರಾಧಿಸಬೇಕು” ಎಂದು ಹೇ ದನು.

ಹೆರೋದನು. ಮಹಾಕಪಟ. ಬಾಯಲ್ಲಿ ಹಾಗೆ ಹೇಳಿದನೆ ಹೊರತು, ಮಗು ಸಿಕ್ಕಿದರೆ ಅದನ್ನು ಕೊಲ್ಲಬೇಕೆಂದು ಅವನು ಆಗಲೆ ಮನಸ್ಸು ಮಾಡಿದ್ದನು.

ಜ್ಞಾನಿಗಳು ಹೆರೋದನನ್ನು ಬೀಳ್ಕೊಂಡು ಯೆರೂಸಲೇಮನ ಬಿಟ್ಟು ಪೂರ್ವಕ್ಕೆ ಹೋದರು. ಬೆತ್ಸೆ ಹೇಮಿಗೆ ಬರುವವರೆಗೂ ನಕ್ಷ ನಿಲ್ಲಲಿಲ್ಲ ಇನ್ನೂ ಮುಂದೆ ಮುಂದೆ ಹೋಯಿತು. ಅಲ್ಲದೆ, “ಬನ್ನಿ ಬನ್ಲಿ! ಬಸ್ಸಿ!” ಎಂಬ ಒಂದು ಸಣ್ಣ ಧ್ವನಿ ಬೇರೆ ಅವರ ಕಿವಿಗೆ ಕೇಳಿಸ ತ್ತಿತ್ತು. ಬೆಳಕನ್ನು ಕಂಡು ಶಬ್ದವನ್ನು ಕೇಳಿ, ಅವರು ಎಷ್ಟು ದೂರ ಬೇಕಾದರೂ ಹೋಗಲು ಸಿದ್ಧರಾಗಿದ್ದರು. ಆದರೆ ಅವರು ಬೆಳೆ ಹೇಮನ್ನು ಸೇರಿದಾಗ ನಕ್ಷತ್ರ ನಿಂತಿತು. ಮಗುವಿದ್ದ ಗುಡಿಸಿ! ಮೇಲೆ ಸರಿಯಾಗಿ ನಿಂತಿತು.

ಆಗ ಜ್ಞಾನಿಗಳು ಒಳಗೆ ಹೋಗಿ ಮಗುವನ್ನೂ ತಾಯೆ ಮರಿಯಳನ್ನೂ ಕಂಡು ಮೊಣಕಾಲೂರಿ ನಮಸ್ಕಾ ರಮಾಡಿದರು. ತಾವ ತಂದ ಅಮೂಲ್ಯವಾದ ಸುಗಂಧದ್ರವ್ಯಗಳಿಂದ ಅವನನ್ನು ಆರಾಧಿಸಿದರು

ಅದೇ ರಾತ್ರಿ ದೇವರು ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡ 4 ಹೆರೋದನ ಬಳಿಗೆ ಹೋಗಬೇಡಿ” ಎಂದನು. ಅದರಂತೆಯೇ ಜ್ಞಾನಿಗಳು ಬಂದ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ತಮ್ಮ ಊರಿ! ಹೋದರು.

ಹೀಗೆ ಜ್ಞಾನಿಗಳು ತನ್ನ ಆಜ್ಞೆಯಂತೆ ನಡೆಯದೆ ತಮ ಊರಿಗೆ ಹೊರಟುಹೋದುದನ್ನು ಕೇಳಿ ಹೆರೋದನಿಗೆ ಮಹಾಕೋಃ ಬಂದಿತು. ಬೆತ್ಸೆ ಹೇಮಿಗೆ ಹೋಗಿ ಎರಡು ವರುಷಕ್ಕೆ ಮೀರಿದ ಮಕ್ಕ ಳೆಲ್ಲರನ್ನೂ ಕೊಂದು ಬರಬೇಕೆಂದು ತನ್ನ ಸೈನಿಕರನ್ನು ಕಳಿಸಿದರು ರೀತಿಯಿಂದ ಯೇಸುವನ್ನೂ ತೀರಿಸಿಬಿಡಬಹುದೆಂದು ಅವನು ಎಂದ ಕೊಂಡಿದ್ದನು.

ಮರಿಯಳ ಮಗ ಯೇಸು ೧೧

ಆದರೆ ಹೆರೋದನ ಸೈನಿಕರು ಬರುವುದಕ್ಕೆ ಮೊದಲೇ ದೇವರು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿಕೊಂಡು, ಹೆರೋದನಿಂದ ನಿನ್ನ ಮಗುವಿಗೆ ಅಪಾಯವಿದೆ. ಅದಕ್ಕಾಗಿ ನಿನ್ನ ಹೆಂಡತಿಯನ್ನೂ ಮಗು ವನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಹೋಗು. ನಾನು ತಿರುಗಿ ಹೇಳುವ ವರೆಗೆ ಹಿಂದಿರುಗಬೇಡ ಎಂದನು. ಅದರಂತೆ ಯೋಸೇಫನು ಅದೇ ರಾತ್ರಿ ಹೆಂಡತಿಯೊಡನೆಯೂ ಮಗುವಿನೊಡನೆಯೂ ಐಗುಪ್ತ ದೇಶಕ್ಕೆ ಓಡಿಹೋದನು.

ಕೆಲವು ಕಾಲಾನಂತರ ಹೆರೋದನು ಸತ್ತನು. ಆಗ ದೇವರು ಪುನಃ ಯೋಸೇಫನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಹಿಂದಿರುಗಬಹುದೆಂದು ಅಪ್ಪಣೆ ಕೊಟ್ಟನು. ಅದರಂತೆ ಯೋಸೇಫನು ಹೆಂಡತಿಯೊಡನೆಯೂ ಮಗುವಿನೊಡನೆಯೂ ಇಸ್ರಯೇಲಿಗೆ ಹಿಂದಿರುಗಿದನು. ಆದರೆ ಹೆರೋ ದನ ಮಗನು ತಂದೆಯ ಬದಲಿಗೆ ಆಳುವನೆಂದು ಕೇಳಿ, ಅಲ್ಲಿ ನಿಲ್ಲಲು ಅಂಜಿ, ನಜರೇತಿನಲ್ಲಿ ಬಂದು ನಿಂತನು.

ಯೇಸುವಿನ ಹನ್ನೆರಡನೆಯ ವರುಷದಲ್ಲಿ

ಪಸ್ಕ ಹಬ್ಬ ವೆಂಬುದು ಯೆಹೊದ್ಯರಿಗೆ ಬಹು ಮುಖ್ಯವಾದ ಹಬ್ಬ.

ಹಿಂದೆ ಯೆಹೂದ್ಯರು ಕಷ್ಟಕಾಲದಲ್ಲಿದ್ದಾಗ ದೇವರು ಅವರನ್ನು ಐಗುಪ್ತ ದೇಶದಿಂದ ಕೆಂಪುಸಮುದ್ರದ ಮಾರ್ಗವಾಗಿ ಕರೆದುತಂದನು. ಸಹಾಯ ನಡೆದುದು ವರ್ಷದ ಮೊದಲನೆಯ ತಿಂಗಳಿನಲ್ಲಿ. ಆದುದ ರಿಂದ ಪ್ರತಿವರ್ಷದ ಮೊದಲನೆಯ ತಿಂಗಳೂ ಅದರ ನೆನಸಿಗೆ ಹಬ್ಬ ಮಾಡುವುದು ಮೊದಲಾಯಿತು. ಸಮಯದಲ್ಲಿ ದೇವರಿಗಾಗಿ ಕುರಿ ಗಳನ್ನೂ ಕರುಗಳನ್ನೂ ಹಣ್ಣುಗಳನ್ನೂ ತಂದು ಒಪ್ಪಿಸುತ್ತಿದ್ದರು. ಹಬ್ಬ ಸುಮಾರು ಎರಡು ತಿಂಗಳ ಕಾಲ ನಡೆಯುತ್ತಿತ್ತು. ಕಾಲದಲ್ಲಿ ಕೆಲವು ದಿವಸ ಉಪವಾಸಮಾಡುವರು, ಇನ್ನು ಕೆಲವು ದಿವಸ ಯಥೇಚ್ಛ ವಾಗಿ ಊಟಮಾಡುವರು. ಹಬ್ಬ ಮುಗಿಯುವ ವರೆಗು ನಾವು ಹಿಂದೆ ಗುಲಾಮರಾಗಿದ್ದೆ ವು. ದೇವರ ದಯೆಯಿಂದ ನಮ್ಮ ದಾಸ್ಯ ಹೋಯಿತು?” ಎಂದು ದೇವರ ಮಹಿಮೆಯನ್ನು ಹೊಗಳುವರು. ಹಬ್ಬ

೧೨ ಯೇಸು ಕ್ರಿಸ್ತ

ಬಂದಾಗ ಯೆಹೊದ್ಯರೆಲ್ಲರೂ ಯೆರೂಸಲೇಮಿನಲ್ಲಿ ಬಂದು ಸೇರು ತ್ರಿದ್ದರು.

ಯೇಸುವಿಗೆ ಹನ್ನೆರಡು ವರ್ಷವಾದಾಗಲೂ ಹಬ್ಬ ಬಂದಿತು. ಆಗ ಮರಿಯ ಯೋಸೇಫರು ಯೇಸುವನ್ನೂ ಕರೆದುಕೊಂಡು ಹಬ್ಬಕ್ಕಾಗಿ ಯೆರೂಸಲೇಮಿಗೆ ಬಂದರು. ಹೆಬ್ಬ ಮುಗಿಯುವ ವರೆಗೂ ಅಲ್ಲಿದ್ದು ಅನಂತರ ನಜರೇತಿಗೆ ಹಿಂದಿರುಗಿದರು. ಹಿಂದಿರುಗುವಾಗ ಅವರು ದೊಡ್ಡ ದೊಂದು ಯಾತ್ರಿಕರ ಗುಂಪಿನೊಡನೆ ಹೋದರು. ಅಲ್ಲಿ ಅವರಿವರೊಡನೆ ಮಾತನಾಡುವ ಭರದಲ್ಲಿ ಅವರಿಗೆ ಯೇಸುವಿನ ಯೋಚನೆಯೇ ಬರಲಿಲ್ಲ. ದಿನ ಸಂಜೆ ದಣಿವಾರಿಸಿಕೊಳ್ಳಲು ಒಂದು ಕಡೆ ತಂಗಿದಾಗ ಮಾತ್ರ ಅವನ ನೆನಪಾಯಿತು. ಅವನ ಸಮವಯಸ್ಸಿನ ಬಾಲಕರ ನಡುವೆ ಯೆಲ್ಲಾ ಹೋಗಿ ಅವನನ್ನು ಹುಡುಕಿದರು. ಆದರೂ ಅವನು ಕಂಡು ಬರಲಿಲ್ಲ. ಆಗ ಮರಿಯ ಯೋಸೇಫರು ಅವನಿಗೆ ಏನಾಯಿತೋ ಎಂದು ಕಳವಳಪಡುತ್ತಾ ಯೆರೂಸಲೇಮಿಗೇ ಮತ್ತೆ ಬಂದರು.

ಯೆರೂಸಲೇಮಿನಲ್ಲಿ ಮೂರು ದಿವಸ ಮನೆಯಿಂದ ಮನೆಗೆ ಅಲೆದು ಮಗನನ್ನು ಹುಡುಕಿದರು. ಆದರೂ ಕಾಣಲಿಲ್ಲ. ಕಡೆಗೆ ತಮ್ಮ ಮಗ ದೊರಕಬೇಕೆಂದು ಹೆರಕೆಮಾಡಿಕೊಳ್ಳು ವುದಕ್ಕಾಗಿ ದೇವಾಲಯವನ್ನು ಪ್ರವೇಶಿಸಿದಾಗ ಯೇಸುವನ್ನು ಅಲ್ಲಿ ಕಂಡರು.

ಅಲ್ಲಿ ಯೇಸು ವಿದ್ವಾಂಸರ ನಡುವೆ ಕುಳಿತಿದ್ದನು. ವಿದ್ವಾಂಸರು ಹಬ್ಬಕ್ಕೆ ಬರುವ ಜನರಿಗೆ ಉಪದೇಶಮಾಡತಕ್ಕಂಧವರು. ಅವರ ನಡುವೆ ಕುಳಿತು ಯೇಸು ಮಾತನಾಡುತ್ತಿದ್ದನು. ಅಲ್ಲಿ ನೆರೆದಿದ್ದ ಜ್ಞಾನವೃದ್ಧರೂ ವಯೋವೃದ್ಧ ರೂ ಆದ ವಿದ್ವಾಂಸರು ಅವನ ಮಾತುಗಳನ್ನು ಕಿವಿ ಗೊಟ್ಟು ಕೇಳುತ್ತಿದ್ದರು. ಅಷ್ಟು ಚಿಕ್ಕ ವಯಸ್ಸಿನವನು ಅಷ್ಟು ತಿಳಿವಳಿಕೆ ಯಿಂದ ಮಾತನಾಡುವುದನ್ನು ಅವರು ಅದು ಮೊದಲು ಕಂಡಿರಲಿಲ್ಲ. ಅವನಿಗೆ ದೇವರೇ ಅಷ್ಟನ್ನೆಲ್ಲಾ ಕಲಿಸಿರಬೇಕೆಂದು ಅವರಿಗೆ ಎನ್ನಿಸುತ್ತಿತ್ತು.

ಹೀಗೆ ವಿದ್ವಾಂಸರು ಕೂಡ ತನ್ನ ಮಗನ ಮಾತಿಗೆ ಮನಸ್ಸು ಕೊಟ್ಟು ಕೇಳುತ್ತಿದ್ದು ದನ್ನು ಕಂಡು ಮರಿಯಳು ಬೆರಗಾದಳು. ಮೊದಲು

ಮರಿಯಳ ಮಗ ಯೇಸು ೧೩

ಏನು ಹೇಳಲೂ ಅವಳಿಗೆ ತೋರಲಿಲ್ಲ. ಅನಂತರ ಕಂದ್ಕ ನಮಗೇಕೆ ಹೀಗೆ ಕಳವಳವುಂಟುಮಾಡಿದೆ? ನಿನ್ನನ್ನು ಎಲ್ಲೆಲ್ಲೂ ಹುದುಕಿ ಕಾಣದೆ ದುಃಖಪಡುತ್ತಿದ್ದೆವಲ್ಲ!” ಎಂದಳು

ಅದಕ್ಕೆ ಯೇಸು ನನ್ನನ್ನು ಇತರ ಕಡೆಗಳಲ್ಲಿ ಏಕೆ ಹುಡುಕಬೇಕು? ನಾನು ನನ್ನ ತಂದೆಯ ಕೆಲಸದಲ್ಲಿಯೇ ಮಗ್ಗ ನಾಗಿರುವೆನೆಂಬುದು ತಿಳಿಯದೆ?” ಎಂದನು.

ಜನರನ್ನು ದೇವರ ಕಡೆಗೆ ತಿದ್ದು ವುದಕ್ಕಾಗಿ ದೇವರು ತನ್ನನ್ನು ಕಳಿಸಿ ದನು ತಾನು ದೇವರ ಮಗ್ಗ ತಾನು ಕಾರ್ಯದಲ್ಲಿ ತೊಡಗಿದ್ದೇನೆ ಎಂದು ಅರ್ಧವಿಟ್ಟು ಅವನು ಆಡಿದುದನ್ನು ಅವಳು ತಿಳಿಯಲಿಲ್ಲ. ಯೋಸೇಫ ನಿಗೂ ಅದು ಅರ್ಧವಾಗಲಿಲ್ಲ. ಅವರು ಯೇಸುವನ್ನು ಜೊತೆಯಲ್ಲಿ ಕರೆದುಕೊಂಡು ನಜರೇತಿಗೆ ಹಿಂದಿರುಗಿ ಹೋದರು.

ನಜರೇತಿನಲ್ಲಿ ಯೇಸು ತನ್ನ ತಾಯಿತಂದೆಯೊಡನೆ ತನಗೆ ಮೂವತ್ತು ವರ್ಷವಾಗುವವರೆಗೂ ಇದ್ದನು. ಆದರೆ ನಡುನಿನ ಹದಿನೆಂಟು ವರ್ಷಗಳನ್ನು ಅವನು ಹೇಗೆ ಕಳೆದನೆಂಬುದು ನಮಗೆ ತಿಳಿದು ಬಂದಿಲ್ಲ.

ದೇವರ ಮಗ ಯೇಸು ದೀಕ್ಸಾಸ್ನಾನ, ತಪಸ್ಸು

ಯೇಸು ತನಗೆ ಸುಮಾರು ಮೂವತ್ತು ವರ್ಷವಾದಾಗ ನಜರೇತಿ ನಿಂದ ಹೊರಟು ಯೋರ್ದನ್‌ ನದಿಯ ಬಳಿ ಬಂದನು. ಬಂದು ಯೋಹಾನನಿಂದ ತನಗೂ ದೀಕ್ಸಾಸ್ನಾನವಾಗಬೇಕೆಂದು ಅವೇಕ್ಸಿಸಿ ದನು. ಅದಕ್ಕೆ ಯೋಹಾನನು ಸುಲಭವಾಗಿ ಒಪ್ಪಲಿಲ್ಲ. ನನ್ನಿಂದ ನಿನಗೆ ದೀಕ್ಸಾಸ್ನಾನವಾಗುವುದಕ್ಕಿಂತ ನಿನ್ನಿಂದ ನನಗೆ ಆಗಬೇಕಾದುದೇ ತಕ್ಕುದು” ಎಂದನು. ಆದರೂ ಯೇಸು ದೇವರ ಆಜ್ಞೆಯಂತೆ ಮನುಷ್ಯ ರನ್ನು ಸನ್ಮಾರ್ಗಕ್ಕೆ ತಿರುಗಿಸಲು ಬಂದವನು ಅಂಥವನು ತಾನು ಮೊದಲು ಸರಿಯಾಗಿ ನಡೆದು, ಅನಂತರ ಇತರರನ್ನು ಹೀಗೆ ನಡೆಯಿರಿ ಎನ್ನುವುದೇ ಯೋಗ್ಯವಾದುದು. ಆದುದರಿಂದ ಅವನು “ನೀನು ಹೇಳುವುದು ಸರಿಯೇ ಆದರೂ ಸದ್ಯಕ್ಕೆ ನೀನೇ ನನಗೆ ದೀಕ್ಸಾಸ್ನಾನ ಮಾಡಿಸು” ಎಂದು ಯೋಹಾನನನ್ನು ಕೇಳಿದನು. ಯೋಹಾನನು ಅದಕ್ಕೆ ಎದುರು ಹೇಳದೆ ಅವನನ್ನುಯೋರ್ದನಿಗೆ ಕರೆದುಕೊಂಡುಹೋಗಿ ಸ್ನಾನಕೊಟ್ಟನು. ಸ್ನಾನವಾಗುವಾಗ ಯೇನು ತನ್ನ ತಂದೆಯಾದ ದೇವರನ್ನು ಪ್ರಾರ್ಥಿಸು ತ್ತಿದ್ದನು.

ಯೇಸು ಯೋಹಾನನ ಕ್ಸೆ ಯಲ್ಲಿ ದೀಕ್ಸಾಸ್ನಾನವನ್ನು ಪಡೆದು ಯೋರ್ದನಿನಿಂದ ಮೇಲೆ ಬರುವಾಗ ಆಕಾಶದಲ್ಲಿ ಒಂದು ಮಹಾಪ್ರಭೆ ಕಾಣಿಸಿಕೊಂಡಿತು. ಪ್ರಭೆ ಒಂದು ಪಾರಿವಾಳದ ರೂಪವನ್ನು ತಾಳಿ, ಯೇಸುವಿನ ಮೇಲೆ ಇಳಿದುಬಂದಿತು. ಆಗ * ಇವನು ನನ್ನ ಪ್ರೀತಿಗೆ ಪಾತ್ರನಾದ ನನ್ನ ಪ್ರಿಯ ಪುತ್ರ” ಎಂದು ಗಗನದಿಂದ ದೇವರ ವಾಣಿ ಕೇಳಿಸಿತು.

ಅದಾದ ಮೇಲೆ ಯೇಸು ನಿರ್ಜನವಾದ ಬೆಂಗಾಡಿಗೆ ಹೋದನು. ಅಲ್ಲಿ ಒಂಟಿಯಾಗಿ ನಲವತ್ತು ದಿನಗಳ ಕಾಲ ಇದ್ದನು. ಸಂಪೂರ್ಣವಾಗಿ ಉಪವಾಸವನ್ನು ಆಚರಿಸುತ್ತಾ ದೇವರೊಡನೆ ಮಾತನಾಡುತ್ತಿದ್ದನು.

ದೇವರೆ ಮಗ ಯೇಸು ೧೫

ನಲವತ್ತು ದಿವಸಗಳಾದ ಬಳಿಕ ಉಪವಾಸವನ್ನು ಮುಗಿಸಿ ಆಹಾರ ಕ್ಕೋಸ್ಕರ ಬೆಂಗಾಡಿನಿಂದ ಹೊರಗೆ ಬಂದನು.

ಸೈತಾನನ ಸೋಲು

ಆಗ ಸೈತಾನನು ಅವನಿಗೆ ಎದುರಾದನು. ಜನರನ್ನು ಪಾಪ ಮಾಡುವಂತೆ ಪ್ರೇರಿಸುವವನೇ ಸೈತಾನನು. ಜನರನ್ನು ಪುಣ್ಯಮಾಡ ದಂತೆ ಪ್ರೇರಿಸುವವನೇ ಸೈತಾನನು. ಯೇಸುವು ತನ್ನ ತಪಸ್ಸನ್ನು ಮುಗಿಸಿ ಹೊರಡುವುದನ್ನು ಕಂಡು, ಅವನು ಜಗದ ಜನರನ್ನು ದೇವರ ಕಡೆಗೆ ಒಲಿಸಿಯಾನೆಂದು ಸೈತಾನನು ಹೆದರಿದನು. ಯೇಸುವಿನಿಂದ ಲೋಕಕಲ್ಯಾಣವಾಗದಂತೆ ತಡೆಯಲು ಸ್ಫತಾನನು ಯತ್ತಿಸಿದನು. ಸಾಧ್ಯವಾದರೆ ಯೇಸುವಿನ ಮನಸ್ಸನ್ನೇ ದೇವರ ಕಡೆಯಿಂದ ತಿರುಗಿಸಿ ತನ್ನ ಕಡೆಗೆ ಒಲಿಸಿಕೊಳ್ಳ ಬೇಕೆಂದು ಸೈತಾನನು ಪ್ರಯತ್ನ ಪಟ್ಟನು.

ಯೇಸುವನ್ನು ಕೆಡಿಸಬೇಕೆಂಬ ಉದ್ದೇಶದಿಂದ ಪಾಪಶಕ್ತಿ ಯಾದ ಸೈತಾನನು ಅವನಿಗೆ ಎದುರಾಗಿ ಬಂದು, “ಆಹಾರ ಬೇಕೆಂದು ಹೊರಟರುವೆಯಲ್ಲ! ನೀನು ದೇವರ ಮಗನೆಂಬುದು ಸತ್ಯವಾದರೆ ಕಲ್ಲುಗಳನ್ನು ರೊಟ್ಟಿ ಗಳಾಗುವಂತೆ ಮಾಡು” ಎಂದನು.

ಅದಕ್ಕೆ ಯೇಸು “ತಿನ್ನಲು ರೊಟ್ಟಿ ಸಂಪಾದಿಸುವುದಕ್ಕಿಂತ ದೇವರು ನಿಯಮಿಸಿದ ಕೆಲಸವನ್ನು ಮಾಡುವುದೇ ಮುಖ್ಯವಾದುದು ಎಂದನು. ಸೈತಾನನ ಉದ್ದೇಶ ಯೇಸುವಿಗೆ ತಿಳಿಯದೆ ಹೋಗಲಿಲ್ಲ.

ಬಳಿಕ ಸೈತಾನನು ಯೇಸುವನ್ನು ಯೆರೂಸಲೇಮಿಗೆ ಕರೆದು ಕೊಂಡು ಹೋದನು. ಅಲ್ಲಿ ಒಂದು ಎತ್ತರವಾದ ದೇವಾಲಯದ ತುದಿ ಯನ್ನು ಅವನಿಗೆ ತೋರಿಸಿ, “ನೀನು ದೇವರ ಮಗನೆಂಬುದು ಸತ್ಯವಾದರೆ ಇದೋ ಇಲ್ಲಿಂದ ಕೆಳಗೆ ಬೀಳು. ನಿನ್ನ ದೇವರು ಕಳುಹಿಸುವ ದೇವ ದೂತರು ನಿನ್ನನ್ನು ಬೀಳದಂತೆ ಆತುಕೊಂಡು ಕಾಪಾಡುವರು” ಎಂದನು.

ಅಪಾಯಕ್ಕೆ ಮುಖ ಕೊಟ್ಟು ಹೋಗಿ, ದೇವರು ನಮ್ಮನ್ನು ಅಪಾಯದಿಂದ ರಕ್ಟಿಸುವನೇ ಎಂದು ಪರೀಕ್ಷಿಸುವುದು ತಕ್ಕುದಲ್ಲ” ಎಂದು ಯೇಸು ಸೈತಾನನಿಗೆ ಉತ್ತರಕೊಟ್ಟನು.

೧೬ ಯೇಸು ಕ್ರಿಸ್ತ

ಅನಂತರ, ಸೈತಾನನು ಯೇಸುವನ್ನು ಒಂದು ದೊಡ್ಡ ಬೆಸ ಮೇಲೆ ಕರೆದೊಯ್ದನು. ಕೆಳಗಡೆ ಸಕಲ ಐಶ್ವರ್ಯದಿಂದ ಸಮ್ಮ ವಾಗಿ ವಿಸ್ತಾರವಾದ ನಾಡು ಕಂಗೊಳಿಸುತ್ತಿತ್ತು. ಸೈತಾನನು ಅದ ಯೇಸುವಿಗೆ ತೋರಿಸಿ, ನೀನು ದೇವರನ್ನು ಬಿಟ್ಟು ನನಗೆ ಕಾಲೂರಿ ಪೂಜೆಮಾಡಿದರೆ, ಕಂಡುಬರುವ ಎಲ್ಲಾ ಸಂಪತ್ತ; ನಿನಗೆ ವಶಪಡಿಸುತ್ತೇನೆ*” ಎಂದು ಆಸೆ ತೋರಿಸಿದನು.

ಆದರೂ ಯೇಸು ಆನೆಗೆ ವಶನಾಗಲಿಲ್ಲ “ನನ್ನ ಕಣ್ಣೆದು ನಿಲ್ಲಬೇಡ, ಸೈತಾನ್‌. ನಿನ್ನ ಸ್ವಾಮಿಯಾದ ದೇವರೊಬ್ಬನಿಗೆ ನಿನ್ನ ಪೂಜೆ ಸಲ್ಲತಕ್ಕುದು- ಎಂಬುದು ನಮ್ಮ ಹಿರಿಯರ ವಚ. ಎಂದನು.

ಆಗ ನ್ಸ ತಾನನಿಗೂ ಮನದಟ್ಟಾಯಿತು ಯೇಸು ದೇವರ ದೃಢವಾಗಿ ನಂಬಿರುವನೆಂದು. ಸೈತಾನನು ಬಾಲ ಮುದುರಿಕೋ ಮರೆಯಾದನು. ಆಗ ದೇವದೂತರು ಪ್ರತ್ಯಕ್ಸವಾದರು, ಯೇಸುವ ಉಪಚರಿಸಿದರು.

ಮೊದಲ ಶಿಷ್ಕರು

ಸ್ವಲ್ಪ ಕಾಲದಲ್ಲಿಯೇ ಯೇಸು ಯೋರ್ದನ್‌ ನದಿಯ : ಬಂದನು. ಅಲ್ಲಿ ಯೋಹಾನನು ಯೇಸುವನ್ನು ಕಂಡು ಇದೆ ಇವನೇ ನೋಡಿ, ದೇವರ ಯಜ್ಞ ಪಶು, ಲೋಕದ ಜನರ ಪಾಪವ: ಹೊತ್ತು ಕಳೆಯತಕ್ಕವನು ಎಂದನು.

ಮಾರನೆಯ ದಿನ ಯೋಹಾನನು ಪುನಃ ಯೇಸುವನ್ನು ತೋ «ಇವನೇ ದೇವರ ಯಜ್ಞ ಪಶು ಎಂದನು. ಆಗ ಯೋಹಾನನ ಇಬ್ಬ ಶಿಷ್ಯರು ಅಲ್ಲಿ ನಿಂತಿದ್ದರು. ಅವರು ಯೇಸುವನ್ನು ಹಿಂಬಾಲಿಸಿದ ಯೇಸು, ಅವರು ತನ್ನ ಹಿಂದೆ ಬರುವುದನ್ನು ಕಂಡು, ಏನು ಬೇಕು ಎಂದನು. « ಗುರುವೆ, ನಿನ್ನ ವಾಸ ಎಲ್ಲಿ?” ಎಂದರವರು. ಯೇ 4 ಬಂದು ನೋಡಿ” ಎಂದನು. ಅವರು ಅವನ ವಾಸಸ್ಥಳಕ್ಕೆ ಬಂ ದಿನ ಅವನೊಡನೆಯೆ ನಿಂತರು. ಆಗ ಸಂಜೆಯಾಗಿತ್ತು.

ದೇವರ ಮಗ ಯೇಸು ೧೩

ಇಬ್ಬ ರಲ್ಲಿ ಒಬ್ಬನ ಹೆಸರು ಆಂದ್ರೆ. ಅವನು ತನ್ನ ಸಹೋದರ ನಾದ ಸೀಮೋನನನ್ನು ಇಂತು 4 ಕ್ರಿಸ್ತ ನು ಸಿಕ್ಕಿದರು. ನಮ್ಮನ್ನು ಕಾಪಾ ಡಲು ಬರಬೇಕಾಗಿದ್ದ. ರಕ್ಷಕನು ಸಿಕ್ಕದನು 4 ಆಂದ್ರೆ ಯು ಸೀಮೋನನನ್ನು ಯೇಸುವಿನ ಬಳಿಗೆ ಕುಂ ಯೇಸುವು ನೀನು ಸೀಮೋನನು. ಮುಂದೆ ನಿನ್ನನ್ನು ಪೇತ್ರನೆನ್ನುವರು” ಎಂದು ಅವ ನನ್ನು ಮಾತನಾಡಿಸಿದನು

ಮಾರನೆಯ ದಿನ ಯೇಸು ಗಲಿಲಾಯಕ್ಕೆ ಹೊರಟನು. ಆಗ ಫಿಲಿಪ್ಸನು ಸಿಕ್ಕಿದರು. ಯೇಸು ನನ್ನ ಹಿಂದೆ ಬಾ” ಎಂದು ಅವನನ್ನು ಕರೆದನು. ಥಿಲಿಪ್ಪನು ಆಂದ್ರೆ ಮತ್ತು ಪೇತ್ರರ ಊರಿನವನು.

ಫಿಲಿಪ್ಪನು ನತಾನಯೇಲನನ್ನು ಹುಡುಕಿ) “ಮೋಶೆಯೂ ಪ್ರವಾದಿಗಳೂ ಕುರಿತು ಹೇಳಿದವನು ದೊರಕಿದನು ಅವನನು ನಜರೇತಿನ ಯೋಸೇಫನ ಮಗನಾದ ಯೇಸು” ಎಂದನು ಅದಕ್ಕೆ ನತಾನಯೇಲನು ನಸರೇತಿನಿಂದ ಒಳ್ಳೆಯದು ಏನು ಬಂದೀತು? *” ಎಂದನು. ಆದರೂ ಬಂದು ನೋಡು? ಎಂದು ಫಿಲಿವ್ಪನು ಅವನನ್ನು ಯೇಸುವಿನ ಬಳಿಗೆ ಕರೆದೊಯ್ದನು. ಯೇಸು ನತಾನಯೇಲನನ್ನು ದೂರದಿಂದಲೇ ನೋಡಿ 4 ಇವನೀಗ ನಿಜವಾದ ಇಸ್ರಯೇಲದವನು ಇವನಲ್ಲಿ ಕಸಟನಿಲ್ಲ” ಎಂದನು. “ನೀನು ನನ್ನನ್ನು ಹೇಗೆ ಬಲ್ಲೆ?” ಎಂದ, ನತಾನಿಯೇಲ್‌. ಅದಕ್ಕೆ ಯೇಸು ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕೆ ಮುಂಚೆ ನೀನು ಅಂಜೂರದ ಮರದ ಕೆಳಗಿದ್ದಾಗ ನೋಡಿದ್ದೆ > ಎನ ಲು ನತಾನಯೇಲನು « ಗುರುವೆ, ನೀನೀಗ ದೇವರ ಮಗ. ನೀನೀಗ ಇಸ್ರಯೇಲದ ರಾಜ” ಎಂದನು. ಆಗ ಯೇಸು “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆ ನೆಂದಾಗ ನಿನಗೆ ನಂಬಿಕೆಯುಂಟಾಯಿತು. ಇದಕ್ಕಿಂತ ಹೆಚ್ಚಿನ ಕಾರ್ಯ ಗಳನ್ನು ನೀನು ನೋಡುವೆ? ಎಂದನು.

ಯೇಸುವಿನ ಮೊದಲನೆಯ ಅದ್ಭುತಕಾರ್ಯ

ಮೂರನೆಯ ದಿನ ಗಲಿಲಾಯದ ಕಾನಾ ನಗರದಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಹೋಗಿದ್ದಳು. ಯೇಸುವನ್ನೂ ಅವನ ಶಿಷ್ಯರನ್ನೂ ಕರೆದಿದ್ದರು ಆಗ ಮದುನೆಯ ಮನೆಯಲ್ಲಿ ದ್ರಾಕ್ಸಾ 2

ಹಿಲೆ ಯೇಸು ಕ್ರಿಸ್ತ

ರಸ ಸಾಲದೆ ಬಂದಿತು. ಅದನ್ನು ಯೇಸುವಿನ ತಾಯಿ ಅವನಿ? ತಿಳಿಸಿದಳು. ಯೇಸು ನನ್ನ ಗೊಡವೆ ನಿನಗೇಕೆ? ನನ್ನ ಸಮಯ ಇನ್ನೂ ಬಂದಿಲ್ಲ” ಎಂದನು. ಅವನ ತಾಯಿ ಅವನು ಹೇಳಿದುದನ್ನು ಮಾಡಿರಿ” ಎಂದು ಅಲ್ಲಿಯ ಕೆಲಸಗಾರರಿಗೆ ಹೇಳಿದಳು.

ಮನೆಯಲ್ಲಿ ನೀರು ತುಂಬುವ ಆರು ಕಲ್ಲಿನ ಪಾತ್ರೆಗಳಿತ್ತು ಯೇನು ಅದರ ತುಂಬಾ ನೀರು ತುಂಬಿಸಿ, “ಈಗ ಇದರಿಂದ ತೋಡಿ ಕೊಂಡು ಊಟದ ಪಾರುಪತ್ಯ ಗಾರನಿಗೆ ಕೊಡು” ಎಂದನು. ಅವರ: ಹಾಗೆಯೆ ಮಾಡಿದರು.

ಊಟದ ಪಾರುಪತ್ಯಗಾರನು ಅದನ್ನು ರುಚಿ ನೋಡಿದನು ನೀರು ನೀರಾಗಿರಲಿಲ್ಲ ದ್ರಾಕ್ಸಾರಸವಾಗಿತ್ತು ಅವನು ಮದುಮಗನನ್ರು ಕರಿದು" ಸಾಮಾನ್ಯವಾಗಿ ಒಳ್ಳೆಯ ದ್ರಾಕ್ಸಾರಸವನ್ನು ಮೊದಲುಕೊಟ್ಟು ಕಡೆಕಡೆಗೆ ಕೆಟ್ಟುದನ್ನು ಕೊಡುವುದು ಪದ್ಧ ತಿ. ಆದರೆ ನೀನು ಉತ್ತಮ ವಾದ ದ್ರಾಕ್ಸಾರಸವನ್ನು ಕಡೆಯವರೆಗೂ ಇಟ್ಟಿದ್ದೆ? ಎಂದನು.

ಗಲಿಲಾಯದ ಕಾನಾ ನಗರದಲ್ಲಿ ಯೇಸು ಮಾಡಿದ ಇದು ಅವನ ಮೊದಲ ದಿವ್ಯಕೃತ್ಯ. ಇದರಿಂದ ಅವನ ಮಹಿಮೆ ಗೊತ್ತಾಯಿತು, ಅವನ ಶಿಷ್ಯರು ಅವನನ್ನು ನಂಬಿದರು.

ಇದಾದ ಬಳಿಕ ಯೇಸು ಕಪೆರ್‌ನೌಮಿಗೆ ಹೋದನು. ಅಲ್ಲಿ ತನ್ನ ತಾಯೊಡನೆಯೂ ನೋದರರೊಡನೆಯೂ ಶಿಷ್ಯರೊಡನೆಯೂ ಇದ್ದನು. ಆದರೂ ಬಹಳ ದಿವಸ ಅಲ್ಲಿ ಇರಲಿಲ್ಲ.

ಯೆರೂಸಲೇಮಿನಲ್ಲಿ ಯೇಸು

ಪಸ್ವಹೆಬ್ಬ ಹತ್ತಿರ ಬಂದಿತು. ಯೇಸು ಯೆರೂಸಲೇಮಿಗೆ ಹೋದನು. ಅಲ್ಲಿನ ದೇವಾಲಯದಲ್ಲಿ ದನ ಕುರಿ ಪಾರಿವಾಳಗಳನ್ನು ಮಾರುವವರು ಅವನ ಕಣ್ಣಿಗೆ ಬಿದ್ದರು; ರೋಮಕರ ನಾಣ್ಯವನ್ನೂ ಯೆಹೊದ್ಯರ ನಾಣ್ಯವನ್ನೂ ಕೊಟ್ಟು ತೆಗೆಯುವವರು ಅವನ ಕಣ್ಣಿಗೆ ಬಿದ್ದರು. ಆಗ ಯೇಸು ಸಣ್ಣ ಹಗ್ಗ ದಿಂದ ಕೊರಡೆಮಾಡಿ ವ್ಯಾಪಾರಿ

ಗಳನ್ನು ಹೊಡೆದು ಹೊರಗೋಡಿಸಿದನು. ದನ ಕುರಿಗಳನ್ನೂ ಓಡಿಸಿ

ದೇನರ ಮಗ ಯೇಸು ೧೯

ಬಿಟ್ಟನು. ನಾಣ್ಯ ಬದಲಾಯಿಸುವವರ ಹಣವನ್ನೆಲ್ಲಾ ತೆಗೆದು ಚೆಲ್ಲಿ ಬಿಟ್ಟನು. ಪಾರಿವಾಳ ಮಾರುವವರನ್ನು ಕುರಿತು ಇದನ್ನೆಲ್ಲಾ ಆಚೆ ಕೊಂಡು ಹೋಗಿರಿ. ನನ್ನ ತಂದೆಯ ಮನೆಯನ್ನು ಸಂತೆಯ ಮಾಳ ಮಾಡಬೇಡಿರಿ” ಎಂದನು. ದೇವರ ಮನೆಯ ಮೇಲಿನ ಅಭಿಮಾನ ದಿಂದ ಯೇಸು ಪರವಶನಾದನು.

ಆಗ ಯೆಹೂದ್ಯರು ಟೆ ಇಷ್ಟೆಲ್ಲಾ ಮಾಡುವ ಅಧಿಕಾರ ನಿನಗೆ ಇರುವುದಕ್ಕೆ ಏನು ಗುರುತು?” ಎಂದರು. ಯೇಸು" ದೇವಾಲಯ ವನ್ನು ಕೆಡವಿಬಿಡಿರಿ. ಇನ್ನು ಮೂರು ದಿನದಲ್ಲಿ ಇದನ್ನು ಕಟ್ಟುತ್ತೇನೆ ಎಂದನು. ಅದಕ್ಕೆ ಯೆಹೂದ್ಯರು “ಈ ಕಟ್ಟಡ ಕಟ್ಟುವುದಕ್ಕೆ ನಲುವತ್ತಾರುವರ್ಷ ಹಿಡಿಯಿತು. ನೀನು ಇದನ್ನು ಮೂರು ದಿನಗಳಲ್ಲಿ ಕಟ್ಟುವೆಯೋ 9೫ ಎಂದರು.

ಯೇಸು ತನ್ನ ದೇಹೆನೆಂಬ ದೇವಾಲಯವನ್ನು ಕುರಿತು ಮಾತ ನಾಡಿದನೆಂದು ಅವರಿಗೆ ತಿಳಿಯಲಿಲ್ಲ. ಮುಂಡೆ, ಮೂರು ವರ್ಷಗಳ ಅನಂತರ, ಯೇಸು ಶಿಲುಬೆಯ ಮೇಲೆ ಮಡಿದು ಮೂರು ದಿವಸಗಳ ಮೇಲೆ ಪುನಃ ಬದುಕಿ ಬಂದಾಗ ಅವನ ಶಿಷ್ಯರಿಗೆ ಮಾತು ನೆನಪಾ ಯಿತು.

ಯೆರೂಸಲೇಮಿನಲ್ಲಿ ಯೇಸು ವಸ್ತ ಹಬ್ಬದ ಸಮಯದಲ್ಲಿ ಮಾಡಿದ ದಿವ್ಯಕೃತ್ಯಗಳನ್ನು ಕಂಡು ಅನೇಕರು ಅವನನ್ನು ನಂಬಿದರು. ಆದರೆ ಅವನು ಮಾತ್ರ ಅವರನ್ನು ನಂಬಲಿಲ್ಲ. ಜನರ ಆಂತರ್ಯ ಎಂತಹ ದೆಂಬುದು ಅವನಿಗೆ ತಿಳಿದಿತ್ತು.

ಯೇಸುವಿನ ಬಗ್ಗೆ ಯೋಹಾನನ ಸಾಕ್ಷಿ ಅನಂತರ ಯೇಸುವೂ ಅವನ ಶಿಷ್ಯರೂ ಯೂದಾಯ ದೇಶಕ್ಕೆ ಬಂದು ತಂಗಿದರು. ಯೇಸು ಅಲ್ಲಿನವರಿಗೆ ದೀಕ್ಸಾಸ್ನಾನ ಮಾಡಿಸ: ತ್ತಿದ್ದನು. ಅತ್ತ ಯೋಹಾನನು ಐನೋನ್‌ ಎಂಬಕಡೆ ತಾನೂ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಆಗ ಯೋಹಾನನ ಶಿಷ್ಯರು ಕೆಲವರು " ಗುರುವೈ, ಅಂದ: ಯೋರ್ದನಿನ ಬಳಿಯಲ್ಲಿ ನೀನು ಒಬ್ಬನಿಗಾಗಿ ಸಾಕ್ಷಿ ಹೇಳಿದೆಯಲ್ಲಾ

ತಿರಿ ಯೇಸು ಕ್ರಿಸ್ತ

ನೆ

ಕ್ರಿ

ಆತನೂ ದೀಕ್ಸಾಸ್ನಾನ ಮಾಡಿಸುತ್ತಾ ಎಲ್ಲರೂ ಅವನ ಬಳಿಗೇ ಹೋಗುತ್ತಾರೆ” ಎಂದರು.

ಅದಕ್ಕೆ ಯೋಹಾನನು ದೇವರು ಕೊಟ್ಟ ಹೊರತು ಯಾರೂ ಏನೂ ಪಡೆಯಲಾರರು. ನಾನು ಕಸ್ತನಲ್ಲ, ಅವನಿಗೆ ಮುಂಚಾಗಿ ಬಂದವನು ಎಂದು ನಾನೇ ಹಿಂದಿನಿಂದ ಹೇಳಿಕೊಂಡಿದ್ದೇನೆ. ಮದುಮಗಳನ್ನು ಉಳ್ಳವನೇ ಮದುಮಗನು. ಮದುಮಗನ ಸ್ನೇಹಿ ತನು ಅವನ ಧ್ವನಿಯನ್ನು ಕೇಳಿ ಅವನು ಬಂದನೆಂದು ಹಿಗ್ಗು ವನು. ಇದರಿಂದ ನನಗೆ ತುಂಬಾ ಸಂತೋಷ. ಅವನು ಮುಂದೆ ಬರಬೇಕು, ನಾನು ಹಿಂದೆ ನಿಲ್ಲಬೇಕು. ಮೇಲಿನಿಂದ ಬಂದವನೇ ಎಲ್ಲರಿಗಿಂತ ಮೇಲಾದನನು. ನೆಲದಲ್ಲಿ ಹುಟ್ಟಿ ದವನು ನೆಲಕ್ಕೆ ಕುರಿತುದನ್ನು ಹೇಳಿಯಾನು. ಮೇಲಿನಿಂದ ಬಂದವನು ತಾನು ಕಂಡುದನ್ನೂ ಕೇಳಿ ದುದನ್ನೂ ಸಾಕ್ಷಿಯಾಗಿ ಹೇಳುವನು. ಆದರೆ ಯಾರೂ ಅವನನ್ನು ನಂಬರು. ಅವನನ್ನು ನಂಬಿದವರು ದೇವರು ಇರುವುದು ಸತ್ಯವೆಂಬು ದನ್ನು ಸ್ಥಿ ರಪಡಿಸುವರು. ದೇವರು ಆರ೦ನ್ನಾದರೂ ಕಳಿಸಿದರೆ ಅವನ ಮಾತು ದೇವರ ಮಾತು. ಏಕೆಂದರೆ ದೇವತ್ವವನ್ನು ಕೊಡುವುದರಲ್ಲಿ ದೇವರಿಗೆ ಕ್ಸ ಹಿಡಿತವಿಲ್ಲ. ತಂದೆಗೆ ಮಗನ ಮೇಲೆ ಪ್ರೀತಿ. ಅವನು ಸರ್ವಸ್ವವನ್ನೂ ಇವನ ಕೆಗೆ ಕೊಟ್ಟಿದ್ದಾನೆ ಮಗನನ್ನು ನಂಬಿ ದವನು ನಿತ್ಯಜೀವಿಯಾಗುವನು. ನಂಬದವನು ದೇವರ ಕೋಪಕ್ಕೆ ಗುರಿಯಾಗುವನು” ಎಂದನು.

ಯೋಹಾನನಿಗಿಂತ ತಾನು ಹೆಚ್ಚು ಜನರಿಗೆ ದೀಕ್ಸಾಸ್ನಾನಮಾಡಿ ಸುವುದನ್ನೂ ಹೆಚ್ಚು ಶಿಷ್ಯರನ್ನು ಪಡೆಯುವುದನ್ನೂ ಕುರಿತು ಫರಿಸಾ ಯರೂ ಆಡಿಕೊಂಡರೆಂದು ಯೇಸುವಿಗೆ ತಿಳಿಯಿತು. ಆಗ ಅವನು ಯೂದಾಯದೇಶವನ್ನು ಬಿಟ್ಟುಹೋದನು.

ಸಮಾರಿಯಾ ಸೀಮೆಯಲ್ಲಿ ಯೇಸು

ವೇಳೆಗೆ ಯೇಸುವನ್ನು ಕೊಲ್ಲಲು ಬಯಸಿದ್ದ ಹೆರೋದನು ಸತ್ತು ಅನನ ಮಗನಾದ ಹೆರೋದನು ಯೂದಾಯಕ್ಕೆ ಉಪರಾಜ

ದೇವರ ಮಗ ಯೇಸು ೨೧

ನಾಗಿದ್ದನು. ಅವನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳೊಡನೆ ಸಂಸಾರಮಾಡುತ್ತಿದ್ದನು. ಅಲ್ಲದೆ ಇನ್ನೂ ಇತರ ದುಷ್ಕೃತ್ಯಗಳನ್ನೂ ಮಾಡುತ್ತಿದ್ದನು. ಅದಕ್ಕಾಗಿ ಯೋಹಾನನು ಹೆರೋದನನ್ನು ಗದರಿಸಿ ಕೊಂಡನು. ಆಗ ಹೆರೋದನು ಯೋಹಾನನನ್ನು ಹಿಡಿತರಿಸಿ ಸೆರೆಯ ಲ್ಲಿರಿಸಿದನು.

ಯೋಹಾನನು ಸೆರೆಸಿಕ್ಸಿದುದು ಯೇಸುವಿಗೆ ತಿಳಿಯಿತು. ಆತನು ಗಲಿಲಾಯಕ್ಕೆ ಹೊರಟನು.

ಗಲಿಲಾಯಕ್ಕೆ ಹೋಗಬೇಕಾದರೆ ಸಮಾರಿಯಾ ಸೀಮೆಯನ್ನು ಹಾಯಬೇಕು ಯೇಸು ಹಾಗೆ ಅದನ್ನು ಹಾಯುವಾಗ ಸಿಖರೆಂಬ ಊರಿನಲ್ಲಿದ್ದ ಒಂದು ಹಳೆಯ ಬಾವಿಯ ಬಳಿ ಬಂದ್ಕು ಕಟ್ಟೆಯ ಮೇಲೆ ಕುಳಿತನು. ಆಗ ಸುಮಾರು ಮಧ್ಯಾಹ್ನವಾಗಿತ್ತು ಅವನ ಶಿಷ್ಯರು ಊಟ ತರುವುದಕ್ಕೆ ಊರಿಗೆ ಹೋಗಿದ್ದರು.

ಆಗ ಅಲ್ಲಿಗೆ ಸಮಾರಿಯದ ಹೆಣ್ಣುಮಗಳೊಬ್ಬಳು ನೀರು ಸೇದಲು ಬಂದಳು. “ಕುಡಿಯಲು ಕೊಂಚ ನೀರು ಕೊಡು, ತಾಯಿ?” ಎಂದು ಯೇಸು ಅವಳನ್ನು ಕೇಳಿದನು. ಅದಕ್ಕೆ ಆಕೆ" ನೀನು ಯೆಹೊದ್ಯನಾಗಿ ಸಮಾರಿಯಾದವಳನ್ನು ನೀರು ಕೇಳಬಹುದೆ?'” ಎಂದಳು. ಕಾಲ ದಲ್ಲಿ ಯೆಹೂದ್ಯರಿಗೂ ಸಮಾರಿಯಾದವರಿಗೂ ಸಂಪರ್ಕವಿರಲಿಲ್ಲ.

ಆಗ ಯೇಸು " ಅಮ್ಮಾ, ದೇವರ ವರದ ವಿಷಯ ನಿನಗೆ ತಿಳಿ ದಿದ್ದರೆ, ನಿನ್ನನ್ನು ನೀರು ಕೇಳುವ ಇವನಾರೆಂದು ನಿನಗೆ ಗೊತ್ತಿದ್ದರೆ ನೀನೂ ಇವನನ್ನು ಬೇಡುತ್ತಿದ್ದೆ. ಇವನು ನಿನಗೆ ಜೀವಕೊಡುವ ನೀರು ಕೊಡುತ್ತಿದ್ದ?” ಎಂದನು.

ಅದಕ್ಕೆ ಆಕೆ "ಸ್ವಾಮಿ, ನೀರು ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ. ಬಾವಿ ಆಳವಾಗಿದೆ. ನೀನು ಜೀವಕೊಡುವ ನೀರನ್ನು ತೆಗೆಯು ವುದು ಎಲ್ಲಿಂದ? ಬಾವಿಯನ್ನು ಹಿಂದೆ ನಮ್ಮ ಹಿರಿಯನಾದ ಯಾಕೋಬನು ತೆಗೆಸಿದನು. ನೀರನ್ನು ಅವನೂ ಅವನ ಮಕ್ಕಳೂ ದನಕರುಗಳೂ ಕುಡಿದಿದ್ದಾರೆ. ಅವನಿಗಿಂತ ನೀನು ದೊಡ್ಡವನೆ? ಎಂದಳು.

೨೨ ಯೇಸು ಕ್ರಿಸ್ತ

ಆಗ ಯೇಸು ಅವಳನ್ನು ಕುರಿತು "" ನೀರನ್ನು ಕುಡಿದವರಿಗೆ ಪುನಃ ದಾಹನುಂಟು ಆದರೆ ನಾನು ಕೊಡುವ ನೀರು ಕುಡಿದವನು ಪುನಃ ದಾಹಪಡನು. ನಾನು ಕೊಡುವ ನೀರು ಅವನಲ್ಲಿ ಉಕ್ಕುವ ಚಿಲುಮೆಯಾಗಿ ಅವನಿಗೆ ನಿತ್ಯಜೀವವನ್ನು ಕೊಡುವುದು ?' ಎಂದನು.

ಆಗ ಆಕೆ « ಸ್ವಾಮಿ, ನನಗೆ ನೀರು ಕೊಡು; ಇನ್ನು ಮುಂದೆ ನನಗೆ ದಾಹವಾಗದಿರಲಿ. ನಾನು ಇಲ್ಲಿಗೆ ನೀರೆಳೆಯಲು ಬರುವುದು ತಪ್ಪಲಿ > ಬಂದಳು.

ಅದಕ್ಕೆ ಯೇಸು " ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ?” ಎಂದನು.

ನನಗೆ ಗಂಡನಿಲ್ಲ?' ಎಂದಳವಳು.

ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. ನಿನಗೆ ಐದು ಜನ ಗಂಡಂದಿರು ಇದ್ದರು. ಈಗ ಇರುವವನು ನಿನ್ನ ಗಂಡನಲ್ಲ. ನೀನು ಹೇಳಿದುದು ಸರಿಯೇ? ಎಂದನು ಯೇಸು.

« ಸ್ಟಾಮಿ, ನೀನು ಪ್ರವಾದಿ. ನಮ್ಮ ಹಿರಿಯರು ಬೆಟ್ಟದಲ್ಲಿ ದೇವರನ್ನು ಆರಾಧಿಸುತ್ತಿದ್ದರು ಆದರೆ ಆರಾಧಿಸತಕ್ಕ ಸ್ಥಳ ಯೆರೂಸ ಲೇಮಿನಲ್ಲಿದೆಯೆಂದು ಹೇಳುನೆಯಲ್ಲ?” ಎಂದಳು ಹೆಣ್ಣು.

ತಾಯಿ, ದೇವರ ಆರಾಧನೆಗೆ ಬೆಟ್ಟಕ್ಕೂ ಬರಬೇಕಾಗಿಲ್ಲ, ಯೆರೂಸಲೇಮಿಗೂ ಹೋಗಬೇಕಾಗಿಲ್ಲ. ಅಂಥ ಕಾಲ ಬರುತ್ತಿದೆ. ನೀವು ಅರಿಯದ ಯಾವುದನ್ನೋ ಆರಾಧಿಸುವಿರಿ. ನಾವು ಅರಿತುದನ್ನು ಆರಾ ಧಿಸುವೆವು. ಆದರೆ ನಿಜವಾದ ದೇವರನ್ನು ತಿಳಿದು ಆರಾಧಿಸುವ ಸಮಯ ಸಮೀಪಿಸುತ್ತಿದೆ? ಎಂದು ಯೇಸು ಹೇಳಿದನು.

ಅದಕ್ಕೆ ಅವಳು « ಕ್ರಿಸ್ತನು ಬರುವನೆಂದು ಕೇಳಿದ್ದೇನೆ. ಆತನು ಬಂದಾಗ ನಮಗೆ ಎಲ್ಲವನ್ನೂ ತಿಳಿಸುವನು” ಎಂದಳು.

ಆಗ ಯೇಸು " ನಿನ್ನ ಹತ್ತಿರ ಮಾತನಾಡುತ್ತಿರುವ ನಾನೇ ಅವನು? ಎಂದನು.

ದೇವರ ಮಗ ಯೇಸು ೨೩

ವೇಳೆಗೆ ಅವನ ಶಿಷ್ಯರು ಊರಿನಿಂದ ಹಿಂತಿರುಗಿ ಬಂದರು. ಹೆಂಗುಸಿನೊಡನೆ ಅನನು ಮಾತನಾಡುತ್ತಿದ್ದು ದನ್ನು ಕಂಡು ಆಶ್ಚರ್ಯ ಪಟ್ಟರು. ಆದರೂ «ನಿನಗೇನು ಬೇಕು? ಅವಳೊಡನೆ ಏಕೆ ಮಾತ ನಾಡುವೆ??' ಎಂದು ಯಾರೂ ಎನ್ನಲಿಲ್ಲ.

ಅನಂತರ ಸಮಾರಿಯದ ಹೆಣ್ಣು ತನ್ನ ಗಡಿಗೆಯನ್ನು ಅಲ್ಲಿಯೇ ಬಿಟ್ಟು ನಗರಕ್ಕೆ ಹೋದಳು. “ನಾನು ಮಾಡಿದುದನ್ನೆಲ್ಲಾ ಕಂಡಂತೆ ತಿಳಿಸಿದವನನ್ನು ನೋಡಿ, ಬನ್ನಿ. ಆತನೇ ಅಲ್ಲವೆ ಕ್ರಿಸ್ತನು?'' ಎಂದು ನಗರದವರನ್ನು ಕರೆದಳು. ನಗರದವರು ಯೇಸುವಿನ ಬಳಿಗೆ ಬಂದರು.

ಅಷ್ಟರಲ್ಲಿ ಯೇಸುವಿನ ಶಿಷ್ಯರು « ಊಟಮಾಡು, ಗುರುವೇ” ಎಂದು ಬೇಡಿದರು.

ಅದಕ್ಕೆ ಯೇಸು ಆಹಾರ ನನ್ನಲ್ಲಿ ಉಂಟು. ಅದನ್ನು ನೀವು ಅರಿಯಿರಿ?” ಎಂದನು.

« ಯಾರಾದರೂ ಏನಾದರೂ ತಿನ್ನಲು ತಂದುಕೊಟ್ಟಿರೊ 9 ೨೨ ಎಂದು ಶಿಷ್ಯರು ಮಾತನಾಡಿಕೊಂಡರು.

ಆಗ ಯೇಸು " ನನ್ನನ್ನು ಕಳಿಸಿದವನ ಸಂಕಲ್ಪವನ್ನು ನಡಸುವುದೆ ನನಗೆ ಆಹಾರ. ಆತನ ಕಾರ್ಯವನ್ನು ಪೂರೈಸುವುದೇ ನನಗೆ ಆಹಾರ. ಇನ್ನು ನಾಲ್ಬು ತಿಂಗಳಾದ ಮೇಲೆ ಸುಗ್ಗಿ ಬರುತ್ತದೆಂದು ನೀವು ಹೇಳುವು ದಿಲ್ಲವೆ? ಇದ್ಯೋ ಕಣ್ಣೆತ್ತಿ ವಿವಿಧೆ ದೇಶಗಳನ್ನು ನೋಡಿರಿ. ಅವು ಬೆಳ್ಳ ಗಾಗಿ ಕುಯಿಲಿಗೆ ಬಂದಿವೆ. ಕುಯಿಲು ಕುಯಿದವನಿಗೆ ಕೂಲಿ ದೊರಕು ತ್ತದೆ, ನಿತ್ಯಜೀವಕ್ಕೆ ಬೇಕಾದ ಫಲ ದೊರಕುತ್ತದೆ. ಬಿತ್ತಿದವನೂ ಕುಯಿದವನೂ ಇಬ್ಬರೂ ಸಂತೋಷಸಡಬಹುದು. ಬಿತ್ತುವವನೊಬ್ಬ, ಕುಯ್ಯುವವನು ಬೇರೊಬ್ಬ-ಎಂಬ ಮಾತು ನಿಜ. ನೀವು ಬಿತ್ತದು ದನ್ನು ಕುಯ್ಯುವುದಕ್ಕಾಗಿ ನಿಮ್ಮನ್ನು ಕಳಿಸುತ್ತಿದ್ದ ನೆ. ದುಡಿದವರು ಬೇರೆಯವರು. ನೀವೂ ದುಡಿತಕ್ಕೆ ಸೇರಿದ್ದೀರಿ” ಎಂದನು.

ವೇಳೆಗೆ ಹೆಂಗುಸಿನ ಮಾತನ್ನು ಕೇಳಿ ಸಮಾರಿಯದವರಲ್ಲಿ ಅನೇಕರಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತ್ತು. ಅವರೆಲ್ಲರೂ ಅವನ

೨೪ ಯೇಸು ಕ್ರಿಸ್ತ

ಬಳಿಗೆ ಬಂದು ಅವನು ಅಲ್ಲಿಯೇ ತಂಗಬೇಕೆಂದು ಬೇಡಿದರು. ಯೇಸುವೂ ಎರಡು ದಿವನ ಅಲ್ಲಿ ತಂಗಿದನು. ಅನೇಕರು ಅನನ ಮಾತನ್ನೇ ಕೇಳಿ ಅವನಲ್ಲಿ ನಂಬಿಕೆಯಿಟ್ಟರು. ಅವರು ಸಮಾರಿಯದ ಹೆಂಗುಸನ್ನು ಶುರಿತ್ಕು " ಈತನು ಲೋಕವನ್ನು ಉದ್ಧಾರಮಾಡುವವ ನೆಂದು ನಾವು ನಂಬಿದ್ದೇವೆ. ನೀನು ಹೇಳಿದುದರಿಂದ ಮಾತ್ರವೇ ನಾವು ನಂಬುತ್ತಿಲ್ಲ. ನಾವೇ ಶಿವಿಯಾರೆ ಕೇಳಿ ನಂಬಿದ್ದೇವೆ” ಎಂದರು. ಯೇಸುವಿನ ಎರಡನೆಯ ಅದ್ಭುತಕಾರ್ಯ

ಎರಡು ದಿನಗಳಾದ ಮೇಲೆ, ಯೇಸು ಅಲ್ಲಿಂದ ಹೊರಟು ಗಲಿಲಾ ಯಕ್ಕೆ ಹೋದನು. ಪಸ್ಕ ಹಬ್ಬದ ಕಾಲದಲ್ಲಿ ಅವನು ಮಾಡಿದ ಮಹಾ ಕಾರ್ಯಗಳನ್ನು ಗಲಿಲಾಯದವರು ತಿಳಿದಿದ್ದರು. ಅವರು ಕೂಡ ಹಬ್ಬದ ದಿವಸ ಯೆರೂಸಲೇಮಿಗೆ ಹೋಗಿದ್ದರು. ಆದ್ದರಿಂದ ಗಲಿಲಾಯದವರು ಯೇಸುವನ್ನು ಬರಮಾಡಿಕೊಂಡರು.

ಯೇಸು ಪುನಃ ಗಲಿಲಾಯದ ಕಾನಾನಗರಕ್ಕೆ ಬಂದನು. ಅಲ್ಲಿಯೇ ಹಿಂದೆ ಅನನು ನೀರನ್ನು ದ್ರಾಕ್ಸಾರಸಮಾಡಿದುದು. ಸಲ ಯೇಸು ಬಂದಾಗ ಗಲಿಲಾಯದಲ್ಲಿ ಒಬ್ಬ ಪ್ರಧಾನನಿದ್ದ. ಯೇಸು ಬಂದುದನ್ನು ತಿಳಿದು, ಸಾಯುವ ಸಿ ತಿಯಲ್ಲಿದ್ದ ತನ್ನ ಮಗನನ್ನು ಬದು ಕಿಸಬೇಕೆಂದು ಅವನು ಯೇಸುವನ್ನು ಬೇಡಿಕೊಂಡನು. “ಅದ್ಭುತಕಾರ್ಯ ಗಳನ್ನೂ ಸೂಚನೆಗಳನ್ನೂ ಕಂಡ ಹೊರತು ಇವರು ನಂಬುವುದಿಲ್ಲವಲ್ಲಾ” ಎಂದು ಯೇಸು ಪೇಚಾಡಿದನು. ಆದರೂ “ದೇವ, ನನ್ನ ಮಗ ಸಾಯುವ ಮುಂಚೆ ಬಾ” ಎಂದು ಪ್ರಧಾನಿ ಬೇಡಿದನು. ಆಗ ಯೇಸು 4 ಹೋಗು. ನಿನ್ನ ಮಗ ಬದುಕಿದನು” ಎಂದನು. ಪ್ರಧಾನಿಯು ಯೇಸು ವಿನ ಮಾತಿನಲ್ಲಿ ನಂಬಿಕೆಯಿರಿಸಿ ಹೋದನು. ಯೇಸು ಮಾತನಾಡಿದ ಹೊತ್ತಿನಿಂದ ತನ್ನ ಮಗ ಗುಣಮುಖವಾದನೆಂದು ಮನೆಗೆ ಹೋದಾಗ ಪ್ರಧಾನಿಗೆ ತಿಳಿಯಿತು. ಅವನು ಯೇಸುವಿನಲ್ಲಿ ನಂಬಿಕೆಯಿಟ್ಟು ಅವನ ಮನೆಯವರೂ ನಂಬಿದರು.

ಇದು ಯೂದಾಯದಿಂದ ಗಲಿಲಾಯಕ್ಕೆ ಬಂದು ಯೇಸು ನಡಸಿದ

ಎರಡನೆಯ ಅದ್ಭುತಕಾರ್ಯ. ಇದರಿಂದ ಯೇಸುವಿನ ಹೆಸರು ದೇಶ

ದೇವರ ಮಗ ಯೇಸು ೨೫

ದಲ್ಲೆಲ್ಲಾ ಹಬ್ಬಿತು. ಅವನು ಅಲ್ಲಿಯ ಸಭಾಮಂದಿರಗಳಲ್ಲಿ ಬೋಧಿಸು ವನು, ಎಲ್ಲರೂ ಅವನನ್ನು ಹೊಗಳುವರು.

ತನ್ನ ಊರಿನಲ್ಲಿ ಯೇಸು

ಯೇಸು ನಜರೇತಿಗೆ ಬಂದನು. ಅಲ್ಲಿಯೇ ಅವನು ಬೆಳೆದುದು. ತನ್ನ ಪದ್ಧತಿಯಂತೆ, ಸಬ್ಬತ್‌ ದಿನದಲ್ಲಿ, ಅಲ್ಲಿಯ ಸಭಾಮಂದಿರಕ್ಕೆ ಹೋಗಿ ಓದಲು ನಿಂತನು. ಪ್ರವಾದಿಯಾದ ಯೆಶಾಯನ ಪುಸ್ತಕದ ಸುರುಳಿಯನ್ನು ಅವನ ಕೈಯಲ್ಲಿಟ್ಟಿರು.

ದೈವತ್ವ ನನ್ನಲ್ಲಿದೆ. ಬಡವರಿಗೆ ಸುವಾರ್ತೆಯನ್ನು ಸಾರುವು ದಕ್ಕಾಗಿ ನನಗೆ ಅಭಿಷೇಕಮಾಡಿದನು ಕುಗ್ಗಿ ದವರಿಗೆ ಹಿಗ್ಗು ಕೊಡುವು ದಕ್ಟೂ, ಸೆರೆ ಸಿಕ್ಕಿದವರಿಗೆ ಮೋಕ್ಷ ಸಾರುವುದಕ್ಕೂ, ಕುರುಡರಿಗೆ ಕಣ್ಣು ಕೊಡುವುದಕ್ಕೂ, ನೊಂದವರನ್ನು ನಲಿಸುವುದಕ್ಕೂ ನನ್ನನ್ನು ಕಳಿಸಿದನು” ಎಂದು ಅವನು ಬಿಚ್ಚಿದ ಭಾಗದಲ್ಲಿ ಬರೆದಿತ್ತು.

ಯೇಸು ಪುಸ್ತಕವನ್ನು ಮುಚ್ಚಿ ಕೊಟ್ಟು ಕುಳಿತರು. ಸಭಾ ಮಂದಿರದಲ್ಲಿ ಎಲ್ಲರ ಕಣ್ಣೂ ಅವನ ಮೇಲೆಯೆ ಇತ್ತು. " ದಿವಸ ಮಾತು ನಿಮ್ಮ ಕವಿಗೆ ಬಿದ್ದು ಪನಿತ್ರಪುಸ್ಮ್ಥಕದ ಮಾತು ಸಫಲವಾಗು ವುದು? ಎಂದು ಯೇಸು ಮೊದಲುಮಾಡಿದನು. ಆಗ ಎಲ್ಲರೂ ಅವ ನನ್ನು ಹೊಗಳಿದರು. ಅವನ ಮುಖದಿಂದ ಬಂದ ಇಂಪಾದ ಮಾತು ಗಳನ್ನು ಕೇಳಿ ಆಶ್ಚರ್ಯನಟ್ಟರು. (ಇವನು ಯೋಸೇಫನ ಮಗ ನಲ್ಲವೇ? ಎಂದು ಮಾತನಾಡಿಕೊಂಡರು.

ಆಗ ಯೇಸು ವೈದ್ಯ, ನಿನ್ನನ್ನು ಮೊದಲು ಗುಣಪಡಿಸಿಕೊ ಎಂಬ ಗಾದೆಯನ್ನು ನನಗೆ ನೀವು ಹೇಳೀರಿ. " ಕಪೆರ್‌ನೌಮಿನಲ್ಲಿ ನೀನು ಮಾಡಿದ ಅದ್ಭುತಕಾರ್ಯಗಳನ್ನು ಕೇಳಿದ್ದೇವೆ; ಅಂಥವನ್ನು ನಿನ್ನ ಸ್ವದೇಶದಲ್ಲಿಯೂ ಮಾಡು' ಎಂದೀರಿ. ಆಗಲಿ, ಆಗಲಿ, ಯಾವ ಪ್ರವಾದಿ ಯನ್ನೂ ಅವನ ಸ್ವದೇಶದಲ್ಲಿ ಒಪ್ಪಿ ಕೊಂಡುದಿಲ್ಲ. ಹಿಂದೆ ನಡೆದುದನ್ನು ಕೇಳಿರಿ ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬರಲಿಲ್ಲ. ಬರ ಬಂದಿತು. ಆಗ ಇಸ್ರಯೇಲ ಜನರಲ್ಲಿ ಎಷ್ಟೋ ವಿಧವೆ

೨೬ ಯೇಸು ಕ್ರಿಸ್ತ

ಯರಿದ್ದರು. ಅವರು ಯಾರ ಬಳಿಗೂ ದೇವರು ಎಲೀಯನನ್ನು ಕಳೆ ಲಿಲ್ಲ; ಸೀದೋನ್‌ದೇಶದ ಒಬ್ಬ ವಿಧನೆಯ ಬಳಿಗೆ ಮಾತ್ರ ಕಳಿಸಿದನ ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರ ಯೇಲ್‌ ಜನರಲ್ಲಿ ಕುಃ ರೋಗಿಗಳು ಅನೇಕರಿದ್ದರು. ಆದರೂ ಅವರಲ್ಲಿ ಒಬ್ಬ ನೂ ಶುದ್ಧನಾ ಲಿಲ್ಲ. ಸುರಿಯದೇಶದ ನಾಮಾನನು ಮಾತ್ರ ಶುದ್ಧನಾದನು ಎಂ ಹೇಳಿದನು.

ಮಾತು ಕೇಳಿ, ಸಭಾಮಂದಿರದಲ್ಲಿ ಎಲ್ಲರೂ ಸಿಟ್ಟಾದರ ಎದ್ದರು. ಯೇಸುವನ್ನು ಊರಹೊರಗೆ ಅಟ್ಟಿ ದರು. ತಮ್ಮ ಊರನ ಕಟ್ಟಿದ್ದ ಗುಡ್ಡದ ಮೇಲಕ್ಕೆ ಅಟ್ಟ ಕೊಂಡು ಹೋಗಿ, ಅಲ್ಲಿಂದ ಅವನನ ಕೆಳಕ್ಕೆ ತಳ್ಳ ಬೇಕೆಂದಿದ್ದರು. ಆದರೆ ಯೇಸು ಅವರ ನಡುವೆ ಹಾಂ ಹೋಗಿ ತನ್ನ ದಾರಿ ತಾನು ಹಿಡಿದನು.

ಕಸೆರ್‌ನಾಮಿನಲ್ಲಿ ಯೇಸು ಯೇಸು ನಜರೇತನ್ನು ಬಿಟ್ಟು ಸಮುದ್ರತೀರದಲ್ಲಿದ್ದ ಕಪೆರ್‌ನೌಮಿ ಬಂದು ವಾಸಿಸಿದನು. ಅಲ್ಲಿ“ ಸಮಯ ಸಮೀಪವಾಗುತ್ತಿದೆ. ದೇವ ರಾಜ್ಯ ಬಳಿಸಾರುತ್ತಿದೆ. ಮಾಡಿದ ಪಾಪಕ್ಕೆ ಪಶ್ಚಾತ್ತಾಸಪಡಿ! ಸುವಾರ್ತೆಯನ್ನು ನಂಬಿರಿ” ಎಂದು ಬೋಧಿಸತೊಡಗಿದನು.

ಗಲಿಲಾಯ ಸಮುದ್ರದ ಬಳಿ ತಿರುಗಾಡುತ್ತಿರುವಾಗ, ಯೇ ಇಬ್ಬ ರು ಬೆಸ್ತ ರನ್ನು ಕಂಡನು. ಅವರು ಅಣ್ಣ ತಮ್ಮಂದಿರು. ತಮ್ಮ ಹೆಸೆರು ಆಂದ್ರೆ. ಅಣ್ಣ ನನ ಹೆಸರು ಸೀನೋನ ; ಇವನೆ ಮುಂದೆ ಫೀ. ನೆನ್ನಿಸಿಕೊಂಡವನು. *ಯೀಸು ಅವರನ್ನು ಕುರಿತು ನನ್ನ ಹಿಂದೆ ಬನಿ ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಿರಿ” Rp ಅವರ ಒಡನೆಯೇ ಬಲೆಗಳನ್ನು ಬಿಟ್ಟು ಅವನನ್ನು ಹಿಂಬಾಲಿಸಿದರು.

ಕೊಂಚ ಮುಂದೆ ಹೋದಾಗ, ಯೇಸು ಇನ್ನಿಬ್ಬರು ಅಣ್ಣ ತಮ್ಮ ದಿರನ್ನು ಕಂಡನು. ಅವರು ಜೆಬೆದಾಯನೆಂಬವನ ಮಕ್ಕಳಾ ಯಾಕೋಬ ಮತ್ತು ಯೋಹಾನ ಎಂಬವರು. ಅವರು ತಮ್ಮ ದೋಃ ಯಲ್ಲಿ ಕುಳಿತು ಬಲೆ ಸರಿಮಾಡುತ್ತಿದ್ದರು. ಯೇಸು ಅವರನು

ದೇವರ ಮಗ ಯೇಸು ೨೭

ಕರೆದನು. ಅವರು ಕೂಡ ತಂದೆಯನ್ನೂ ಕೂಲಿಯವರನ್ನೂ ದೋಣಿ ಯಲ್ಲಿ ಬಿಟ್ಟು ಯೇಸುವಿನ ಹಿಂದೆ ಹೊರಟರು.

ಎಲ್ಲರೂ ಕಪೆರ್‌ನೌಮಿಗೆ ಬಂದರು. ಅಲ್ಲಿಯ ಸಭಾಮಂದಿರಗಳಲ್ಲಿ ಯೇಸು ಸಬ್ಬತ್‌ ದಿನಗಳಲ್ಲಿ ಬೋಥೆಮಾಡಿದನು. ಅವನ ಉಪದೇಶಕ್ಕೆ ಜನ ಬೆರಗಾದರು. ಅವನು ಪುಸ್ತಕ ಓದಿದ ಪಂಡಿತರಂತೆ ಬೋಧೆ ಮಾಡದೆ ಅಧಿಕಾರವಿರುವವನಂತೆ ಮಾತನಾಡುತ್ತಿದ್ದನು.

ಸಭಾಮಂದಿರದಲ್ಲಿ ದೆವ್ವ ಹಿಡಿದವನೊಬ್ಬನಿದ್ದನು. ಅವನು ಯೇಸುವನ್ನು ಕಂಡು, “ಹಿ ನಜರೇತಿನ ಯೇಸು, ನಿನ್ನ ಗೊಡನೆ ನಮಗೇಕೆ? ನಮ್ಮನ್ನು ನಾಶಗೊಳಿಸಲು ಬಂದೆಯಾ? ನೀನು ಆರೆಂಬುದು ನನಗೆ ಗೊತ್ತು. ನಿನ್ನನ್ನು ದೇವರು ಆರಿಸಿ ಕಳಿಸಿದನು? ಎಂದು ಕೆರಿಚಿ ಕೊಂಡನು. ಯೇಸು ಅವನನ್ನು ಗದರಿಸಿ ಬಾಯಿ ಮುಚ್ಚು. ಅವನನ್ನು ಬಿಟ್ಟು ಹೋಗು?” ಎಂದನು. ದೆವ್ವ ಕೂಗಿಕೊಳ್ಳುತ್ತಾ ಅವನನ್ನು ಬಿಟ್ಟು ಹೋಯಿತು.

ಆಗ ಎಲ್ಲರೂ ಬೆರಗಾದರು, ಎಲ್ಲರೂ ಹೆದರಿದರು. " ಇದೇನಿದು? ಇದೇನು ಹೊಸ ತತ್ತ್ವ? ದೆವ್ವಗಳಿಗೆ ಕೂಡ ಹೇಗೆ ಆಜ್ಞೆಮಾಡುತ್ತಾನೆ! ಅವು ಕೂಡ ಇವನ ಮಾತನ್ನು ಹೇಗೆ ಕೇಳುತ್ತವೆ!” ಎಂದು ಮಾತನಾಡಿ ಕೊಂಡರು. ಕೂಡಲೇ ಯೇಸುವಿನ ಮಹಿಮೆ ಗಲಿಲಾಯಸೀಮೆ ಯಲ್ಲೆಲ್ಲಾ ಹೆಬ್ಬಿ ಹರಡಿತು.

ಯೇಸು ಸಭಾಮಂದಿರದಿಂದ ಹೊರಟು ನೇರಾಗಿ ಸೀಮೋನ ಅಂದ್ರೆಯರ ಮನೆಗೆ ಬಂದನು. ಯಾಕೋಬ ಯೋಹಾನರೂ ಬಂದರು. ಸೀಮೋನನ ಅತ್ತೆ ಜ್ವರ ಬಂದು ಮಲಗಿದ್ದಳು. ಅದು ಯೇಸುವಿಗೆ ತಿಳಿಯಿತು. ಅವನು ಅವಳ ಬಳಿ ಸಾರಿ, ಕ್ಸ ಹಿಡಿದು ಮೇಲೆತ್ತಿದನು. ಜ್ವರ ಬಿಟ್ಟುಹೋಗಲೆಂದು ಆಜ್ಞೆಮಾಡಿದನು. ತತ್‌ಕ್ಷಣ ಜ್ವರ ಬಿಟ್ಟು ಹೋಯಿತು. ಆಕೆ ಎದ್ದು ಯೇಸುವಿಗೆ ಉಪಚಾರ ಮಾಡಿದಳು.

ಸೂರ್ಯ ಮುಳುಗಿ ಸಂಜೆಯಾಯಿತು. ರೋಗಿಗಳನ್ನೂ ದೆವ್ವ ಹಿಡಿದವರನ್ನೂ ಅವನ ಹತ್ತಿರ ಕರೆತಂದರು. ಊರಿಗೆ ಊರೇ ಮನೆ ಬಾಗಿಲಲ್ಲಿ ನೆರೆಯಿತು. ಅವನು ಅನೇಕ ರೋಗಿಗಳನ್ನು ಗುಣಪಡಿಸಿದನು,

೨೮ ಯೇಸು ಕ್ರಿಸ್ತ

ದೆವ್ವಗಳನ್ನು ಓಡಿಸಿದನು. “ನೀನೀಗ ದೇವರ ಮಗ?” ಎಂದು ಜೆವ್ರಗಳು ಕೂಗಿಕೊಂಡು ಓಡಿಹೋದನು. ಅವನು ಅವುಗಳನ್ನು ಮಾತನಾಡಗೊಡದೆ ಗದರಿಸಿಕೊಂಡನು.

ಬೆಳಗಿನ ಜಾವ ಅಷ್ಟು ಹೊತ್ತಿಗೇ ಎದ್ದು, ಯೇಸು ನಿರ್ಜನವಾದ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸಿದನು. ಸೀಮೋನನೂ ಅವನ ಸಂಗಡಿಗರೂ ಯೇಸುವನ್ನು ಹಿಂಬಾಲಿಸಿದರು. ಅವನನ್ನು ಕಂಡಾಗ $ ನಿನ್ನನ್ನು ಎಲ್ಲರೂ ಹುಡುಕುತ್ತಾರೆ” ಎಂದರು. ಜನರು ಕೂಡ ಗುಂಪು ಗುಂಪಾಗಿ ಅವನನ್ನು ಹುಡುಕಿಕೊಂಡು ಬಂದು ಅಡ್ಡಗಟ್ಟಿ ನಿಲ್ಲಿಸಿದರು. ಅವನು ಅವರನ್ನು ಬಿಟ್ಟುಹೋಗಲು ಆಗಲಿಲ್ಲ. ಯೇಸು ಅವರನ್ನು ಕುರಿತು ನಾವು ನೆರೆಹೊರೆಯ ನಗರಗಳಿಗೂ ಪಟ್ಟಣಗಳಿಗೂ ಹೋಗೋಣ. ದೇವರ ರಾಜ್ಯದ ಸುವಾರ್ತೆಯನ್ನು ನಾನು ಅಲ್ಲಿ ಬೋಧಿಸಬೇಕು. ನಾನು ಬಂದಿರುವುದು ಉದ್ದೇಶಕ್ಕಾಗಿಯೇ 2) ಎಂದನು.

ಯೇಸು ಗಲಿಲಾಯದ ಸುತ್ತಾ ಸಂಚರಿಸಿದನು. ಅವರ ಸಭಾ ಮಂದಿರಗಳಲ್ಲಿ ಬೋಧಿಸಿದನು. ದೇವರ ರಾಜ್ಯದ ಸುವಾರ್ತೆಯನ್ನು ಸಾರಿದನು. ಸಿರಿಯಾ ದೇಶದಲ್ಲೆಲ್ಲಾ ಅವನ ಹೆಸರು ಹಬ್ಬಿತು. ಅಸ್ವಸ್ಥರು ವಿವಿಧ ರೋಗಿಗಳು, ದೆವ್ವ ಹಿಡಿದವರು, ಮೂರ್ಛೆ ಬೀಳುವವರ್ಕು ಹುಚ್ಚರು, ವಾರ್ಶ್ವವಾಯು ಬಂದವರು ಎಲ್ಲರೂ ಅವನ ಬಳಿ ಬಂದರು. ಯೇಸು ಎಲ್ಲರನ್ನೂ ಗುಣಪಡಿಸಿದನು. ಗಲಿಲಾಯ್ಕ ದೆಕಪೊಲಿ, ಯೆರೂಸ ಲೇಮ್‌, ಯೂದಾಯ ಎಂಬ ಸ್ಥಳಗಳಿಂದಲೂ ಯೋರ್ದನ್‌ ನದಿಯ ಆಜೆಕಡೆಯಿಂದಲೂ ಜನ ಗುಂಪುಗುಂಪಾಗಿ ಅವನ ಹಿಂದೆ ಹೋದರು.

ಬೆಟ್ಟದ ಮೇಲಿನ ಬೋಧೆ

ಜನರ ಗುಂಪನ್ನು ಕಂಡು, ಯೇಸು ಒಂದು ಬೆಟ್ಟದ ಮೇಲೆ ಹೋಗಿ ಕುಳಿತುಕೊಂಡನು. ಅವನ ಶಿಷ್ಯರೂ ಕುಳಿತುಕೊಂಡರು. ಆಗ ಯೇಸು ಅವರಿಗೆ ಬೋದಧೆಮಾಡಿದನು :

“ಅಹಂಕಾರವಿಲ್ಲದವರು ಧನ್ಯರು; ಪರಲೋಕದ ರಾಜ್ಯ ಅವರದು. ವಿನಯವಂತರು ಧನ್ಯರು; ಅವರೇ ನೆಲದ ಒಡೆಯರಾಗುವರು. ದುಃಖ ಪಡುವವರು ಧನ್ಯರು, ಅವರನ್ನು ಸಂತ್ಸೈಸಲಾಗುವುದು. ನ್ಯಾಯಕ್ಕಾಗಿ ಹಾರೈ ಸುವವರು ಧನ್ಯರು; ಅವರಿಗೆ ನ್ಯಾಯ ಪೂರ್ತಿಯಾಗಿ ದೊರಕು ವುದು. ದಯಾವಂತರು ಧನ್ಯರು ; ಅವರಿಗೆ ದಯೆ ದೊರಕುವುದು. ಪರಿ ಶುದ್ಧಹೃದಯರು ಧನ್ಯರು; ಅವರು ದೇವರನ್ನು ಕಾಣುವರು ಶಾಂತಿ ಸ್ಥಾಪಕರು ಧನ್ಯರು, ಅವರನ್ನು ದೇವರ ಮಕ್ಕಳೆಂದು ಕರೆಯುವರು. ಬಂದ ಹಿಂಸೆಯನ್ನು ಧರ್ಮಕ್ಕಾಗಿ ತಾಳುವವರು ಧನ್ಯರು; ಪರಲೋಕದ ರಾಜ್ಯ ಅವರದು.

“ಜನರು ನನಗೋಸ್ಕರವಾಗಿ ನಿಮ್ಮನ್ನು ನಿಂದಿಸಿ, ಹಿಂಸಿಸಿ, ಅನ್ಯಾಯವಾಗಿ ಇಲ್ಲಸಲ್ಲದುದನ್ನು ನಿಮ್ಮ ಮೇಲೆ ಹೊರಿಸಿದಾಗ ನೀವು ಧನ್ಯರು. ಅದಕ್ಕಾಗಿ ಸಂತೋಷಪಡಿರಿ, ಉಲ್ಲಾ ಸಪಡಿರಿ. ಪರಲೋಕದಲ್ಲಿ ನೀವುಪಡೆಯುವ ಫಲ ಹಿರಿದು. ನಿಮಗಿಂತ ಮೊದಲು ಬಂದ ಪ್ರವಾದಿ ಗಳನ್ನೂ ಹೀಗೆಯೇ ಗೋಳುಗುಟ್ಟ ಕೊಂಡರು.

“ನೀವು ಭೂಮಿಗೆ ಉಪ್ಪಿನ ಹಾಗೆ ಇದ್ದೀರಿ. ಉಪ್ಪು ಸಫ್ರೆಯಾದರೆ ಅದಕ್ಕೆ ರುಚಿ ಏತರಿಂದ ಬರಬೇಕು? ಉಪ್ಪಿನ ರುಚಿ ಇಲ್ಲದಿದ್ದರೆ ಅದು ಏನೂ ಕೆಲಸಕ್ಕೆ ಬಾರದುದು, ಆಚೆ ಎಸೆದು ಜನರ ಕಾಲುತುಳಿತಕ್ಕೆ ಸಿಕ್ಕಲು ಯೋಗ್ಯವಾದುದು.

“ನೀವು ಜಗತ್ತಿನ ಬೆಳಕು. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿ ಡಲಾಗುವುದಿಲ್ಲ. ಹಣತೆಯನ್ನು ಹಚ್ಚಿ ಬಟ್ಟಲ ಕೆಳಗೆ ಮುಚ್ಚಿಡು ವುದಿಲ್ಲ; ಮನೆಯವರಿಗೆಲ್ಲಾ ಜೆಳಕಾಗಲೆಂದು ಕಂಬದ ಮೇಲೆ ಇರಿಸು ವರು. ಅದರಂತೆಯೇ ನಿಮ್ಮ ಬೆಳಕೂ ಜನರ ಎದುರಿಗೆ ಬೆಳಗಲಿ. ನಿಮ್ಮ

೩೦ ಯೇಸು ಕ್ರಿಸ್ತ

ಸತ್ಕಾರ್ಯಗಳನ್ನು ಅವರು ಕಾಣಲಿ, ಪರಲೋಕದಲ್ಲಿರುವ ನಿಮ್ಮ ತಂದೆ ಯನ್ನು ಕೊಂಡಾಡಲಿ.

“ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾ ಗಲಿ ನಾಶಮಾಡಲು ನಾನು ಬಂಡು SN ನಾನು ನಾಶಮಾಡಲು ಬಂದಿಲ್ಲ, ನೆರವೇರಿಸಲು ಬಂದಿದ್ದೇನೆ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಮೋಶೆಯ ಧರ್ಮಶಾಸ್ತ್ರವು ನೆರವೇರುವ ವರೆಗೆ, ಭೂಮಿ ಆಕಾಶಗಳು ನಾಶವಾಗುವ ವರೆಗೆ, ಅದರೊಳಗಿನ ಒಂದು ನೆ ನೊನ್ನೆ ಯಾಗಲಿ ಗುಡಿಸಾಗಲಿ ಅಳಿಯಲಾರದು. ಆಜ್ಞೆಗಳಲ್ಲಿ ಅತಿ ಸಣ್ಣ ದಾದುದೊಂದನ್ನು ಮುರಿದವನು, ಮುರಿಯುವಂತೆ ಬೋಧಿಸಿದವನು, ಪರಲೋಕದಲ್ಲಿ ಅತಿ ಹೀನನೆನ್ಸಿಸಿಕೊಳ್ಳುವನು. ಆದರೆ ಅದನ್ನು ಪಾಲಿಸಿ,

ಲಿಸಬೇಕೆಂದು ಬೋಧಿಸುವವನು, ಪರಲೋಕದಲ್ಲಿ ದೊಡ್ಡವನೆನ್ಸಿಸಿ ಕೊಳ್ಳುವನು. ಯೆಹೂದ್ಯ ಶಾಸ್ತ್ರಿಗಳ ಮತ್ತು ಫರಿಸಾಯರ ಧರ್ಮ ಕ್ಕಿಂತ ನಿಮ್ಮ ಧರ್ಮ ಹೆಚ್ಚಿನದಾದ ಹೊರತು ನಿಮಗೆ /ಪರಲೋಕ ಪ್ರಾಪ್ತಿಯಾಗಲಾರದು.

"ಕೊಲ್ಲಕೂಡದು, ಕೊಂದವನು ನ್ಯಾಯವಿಚಾರಣೆಗೆ ಗುರಿಯಾಗು ವನು--ಎಂದು ಹಿಂದಿನವರಿಗೆ ಹೇಳಿದರೆಂದು ಕೇಳಿದ್ದೀರಿ. ಆದರೆ, ತನ್ನ ಸೋದರನ ಮೇಲೆ ಸಿಟ್ಟಾಗುವವನೂ ನಿಚಾರಣೆಗೆ ಗುರಿಯಾಗುವನೆಂದು ನಾನು ಹೇಳುತ್ತೇನೆ. ತನ್ನ ಸೋದರನನ್ನು ಛೀ ಎನ್ನುವವನು ವಿಚಾ ರಣೆಗೆ ಗುರಿಯಾಗುವನು. ತನ್ನ ಸೋದರನನ್ನು ಮೂರ್ಮನೆನ್ನುವವನು ನರಕದ ಬೆಂಕಿಗೆ ತುತ್ತಾಗುವನು. ಆದ್ದರಿಂದ, ದೇವರ ಬಲಿಪೀರದ ಮುಂದೆ ಬಲಿಯನ್ನು ಕೊಡಲು ನಿಂತಾಗ, ನಿನ್ನ ಸೋದರನಿಗೂ ನಿನಗೂ ಇರುವ ಮನಸ್ತಾಪ ನೆನಪಾದರೆ ಬಲಿಯನ್ನು ಬಲಿಪೀರದ ಮೇಲೆ ಬಿಡು; ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನ ಮಾಡಿಕೊ. ಅನಂತರ ಬಂದು ನಿನ್ನ "ಕಾಣಿಕೆಯನ್ನು ಒಪ್ಪಿಸು.

"ಇನ್ನೂ ಅವಕಾಶವಿರುವಾಗಲೇ ನಿನ್ನ ಎದುರಾಳಿಯೊಡನೆ ಒಪ್ಪಂದಮಾಡಿಕೊ. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಬಳಿಗೆ ಎಳೆದಾನು. ನ್ಯಾಯಾಧಿಪತಿ ನಿನ್ನನ್ನು ತಕ್ಕ ಅಧಿಕಾರಿಗೆ ಒಪ್ಪಿಸಿ

ಚೆಟ್ಟಿ ಮೇಲಿನ ಬೋಧೆ ತಿಗ

ಯಾನು. ಅವನು ನಿನ್ನನ್ನು ಸಿರೆ ಹಾಕಿಯಾನು. ಸಲ್ಲಿಸಬೇಕಾದುದನ್ನು ಕಡೆಕಾಸುಮುಟ್ಟ ಸಲ್ಲಿಸಿದ ಹೊರತು ನೀನು ಅಲ್ಲಿಂದ ಹೊರಗೆ ಬರ ಲಾರೆ.

“ವ್ಯಭಿಚಾರ ಮಾಡಕೂಡದೆಂದು ಹಿಂದಿನವರಿಗೆ ಹೇಳಿದುದನ್ನು ಕೇಳಿದ್ದೀರಿ. ಆದರೆ ಹೆಣ್ಣನ್ನು ಮೋಹದಿಂದ ನೋಡಿದವನು ತನ್ನ ಮನಸ್ಸಿನಲ್ಲಿ ಆಗಲೇ ವ್ಯಭಿಚಾರಮಾಡಿರುವನೆಂದು ನಾನು ಹೇಳುತ್ತೇನೆ. ನಿನ್ನ ಬಲಗಣ್ಣಿ ನಿಂದ ಪಾವವಾಗುವುದಾದರೆ ಅದನ್ನು ಕಿತ್ತು ಬಿಸುಡು. ಇಡಿಯ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ಒಂದು ಅಂಗ ನಾಶ ವಾಗುವುದೇ ವಾಸಿ. ನಿನ್ನ್ನ ಬಲಗೈ ಯಿಂದ ಪಾಪವಾಗುವುದಾದಕ್ಕೆ ಅದನ್ನು ಕತ್ತರಿಸಿ ದೂರ ಬಿಸಾಡು. ಇಡಿಯ ದೇಹ ನರಕಕ್ಕೆ ಈಡಾ ಗುವುದಕ್ಕಿಂತ ಒಂದು ಅಂಗ ನಾಶವಾಗುವುದೇ ಮೇಲು.

“ಮದುವೆಯಾದ ಹೆಂಡತಿಯನ್ನು ಬಿಟ್ಟು ಬಿಡುವವನು ಆಕೆಗೆ ಬಿಡು ಗಡೆಯ ಪತ್ರವನ್ನು ಕೊಡಬೇಕೆಂದು ಕೇಳಿದ್ದೀರಿ. ಆದರೆ ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಡುವವನು ಅವಳು ವ್ಯಭಿ ಚಾರಿಣಿಯಾಗುವುದಕ್ಕೆ ಕಾರಣನಾಗುವನೆಂದು ನಾನು ಹೇಳುತ್ತೇನೆ. ಅಲ್ಲದೆ, ಗಂಡನು ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿ ಚಾರಿಯಾಗುತ್ತಾನೆ.

“ಸುಳ್ಳು ಆಣೆ ಇಡಬಾರದು, ದೇವರ ಎದುರಿಗೆ ಇಟ್ಟ ಆಣೆಯನ್ನು ನಡಸಬೇಕು “ಎಂದೂ ನೀವು ಕೇಳಿದ್ದೀರಿ. ಆದರೆ ಆಣೆಯನ್ನೇ ಇಡ ಬೇಡಿರೆಂದು ನಾನು ಹೇಳುತ್ತೇನೆ. ಆಕಾಶದ ಮೇಲೆ ಆಣೆಯಿಡಬೇಡಿ; ಅದು ದೇವರ ಸಿಂಹಾಸನ. ಭೂಮಿಯ ಮೇಲೆ ಆಣೆಯಿಡಬೇಡಿ; ಅದು ದೇವರ ಪಾದಹಪೀಠ. ಯೆರೂಸಲೇಮಿನ ಮೇಲೆ ಆಣೆಯಿಡಬೇಡಿ; ಅದು ಹಿರಿಯರಸನ ಪಟ್ಟಣ. ನಿಮ್ಮ ತಲೆಯ ಮೇಲೆಯೂ ಆಣೆಯಿಡ ಬೇಡಿ; ಒಂದು ಬಿಳಿಯ ಕೂದಲನ್ನಾಗಲಿ ಕರಿಯ ಕೂದಲನ್ನಾಗಲಿ ನೀವು ಸೃಷ್ಟಿಮಾಡಲಾರಿರಿ. ಹೌದಾದರೆ ಹೌದೆನ್ಸಿರಿ, ಇಲ್ಲವಾದರೆ ಇಲ್ಲವೆನ್ನಿರಿ; ಅಸ್ಟೆ. ಇದಕ್ಕೆ ಮೀರಿದುದು ಪಾಪವಾಗುವುದು.

೩೨ ಯೇಸು ಕ್ರಿಸ್ತ

“ಕಣ್ಣಿಗೆ ಪ್ರತಿಯಾಗಿ ಕಣ್ಣು ತೆಗೆ ಹಲ್ಲಿಗೆ ಬದಲಾಗಿ ಹಲ್ಲು ತೆಗೆ ಎಂದೂ ಕೇಳಿದ್ದೀರಿ. ಆದರೆ ಪಾಪವನ್ನು ಪ್ರತಿಭಟಸಬೇಡಿರೆಂದು ನಾನು ಹೇಳುತ್ತೇನೆ. ನಿಮ್ಮ ಬಲಕೆನ್ನೆಗೆ ಒಬ್ಬನು ಹೊಡೆದರೆ, ಇನ್ನೊಂದು ಕೆನ್ನೆಯನ್ನೂ ತಿರುಗಿಸಿ ತೋರಿಸಿರಿ. ಒಬ್ಬನು ನಿಮ್ಮೊಡನೆ ವ್ಯಾಜ್ಯವಾಡಿ ಒಳಅಂಗಿಯನ್ನು ಕಿತ್ತು ಕೊಂಡರೆ, ಹೊರಅಂಗಿಯನ್ನೂ ಅವನಿಗೆ ಕೊಡಿರಿ... ಬಲವಂತದಿಂದ ಒಂದು ಮೈಲಿ ನಡಸಿದರೆ, ಅವ ನೊಡನೆ ಎರಡು ಮೈಲಿ ನಡೆಯಿರಿ. ಬೇಡುವವನಿಗೆ ನೀಡು. ಕಡ ಕೇಳಲು ಬಂದವನಿಂದ ಮುಖ ತಿರುವಿಕೊಳ್ಳ ಬೇಡ.

"ನೆರೆಯವನನ್ನು ಪ್ರೀತಿಸಬೇಕು, ಶತ್ರುವನ್ನು ದ್ರೇಷಿಸಬೇಕು-- ಎಂದು ಹೇಳಿರುವುದನ್ನೂ ಕೇಳಿದ್ದೀರಿ. ಆದರೆ "ಶತ್ರುಗಳನ್ನು ಪ್ರೀತಿ ಸಿರಿ ದ್ವೇಷಿಸಿದವರಿಗೆ ದಯೆ ತೋರಿರಿ, ಗೋಳುಹುಯ್ದು ನಿಂದಿಸು ವವರಿಗಾಗಿ ಪ್ರಾರ್ಥನೆ ಮಾಡಿರಿ, ಇದರಿಂದ ಪರಲೋಕದಲ್ಲಿರುವ ನಿಮ್ಮ